ಮಡಿಕೇರಿ ನ.28 NEWS DESK : ಕಲ್ಲಿಕೋಟೆಯ ಐ.ಸಿ.ಎ.ಆರ್ ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಸುವರ್ಣ ಮಹೋತ್ಸವದ ಅಂಗವಾಗಿ ಅಪ್ಪಂಗಳದಲ್ಲಿ ಐ.ಸಿ.ಎ.ಆರ್ ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯ ಪ್ರಾದೇಶಿಕ ಕೇಂದ್ರದಲ್ಲಿ “ಕರಿಮೆಣಸಿನ ಸುಧಾರಿತ ಮತ್ತು ಸುಸ್ಥಿರ ಕೃಷಿ ತಂತ್ರಜ್ಞಾನಗಳು” ಎಂಬ ವಿಷಯದ ಕುರಿತು ಬೆಳೆಗಾರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪ್ರಗತಿಪರ ರೈತ ಶ್ಶ್ಯಾಮ್ ಅಯ್ಯಪ್ಪ ಉದ್ಘಾಟಿಸಿ ತಮ್ಮ ಕೃಷಿ ಅನುಭವವನ್ನು ಹಂಚಿಕೊಂಡರು. ಅಪ್ಪಂಗಳ ಐ.ಸಿ.ಎ.ಆರ್.ಐ.ಐ. ಎಸ್.ಆರ್, ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ. ಎಸ್.ಜೆ.ಅಂಕೆಗೌಡ ಮಾತಾನಾಡಿ ಐ. ಐ. ಎಸ್. ಆರ್. ಪ್ರಾದೇಶಿಕ ಕೇಂದ್ರದ ಕಾಳುಮೆಣಸಿನ ಸಂಶೋಧನ ಕಾರ್ಯಗಳ ಬಗ್ಗೆ ಮತ್ತು ಕರ್ನಾಟಕದಲ್ಲಿ ಕಾಳುಮೆಣಸಿನ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಕಾರ್ಯಾಗಾರದಲ್ಲಿ ಕಾಳುಮೆಣಸಿನ ತಳಿ ವೈವಿಧ್ಯತೆ, ಗುಣಮಟ್ಟದ ಸಸ್ಯಾಭಿವೃದ್ದಿ ವಿಧಾನಗಳು, ವೈಜ್ಞಾನಿಕ ಕೃಷಿ ಪದ್ಧತಿಗಳು, ರೋಗ ಮತ್ತು ಕೀಟ ನಿರ್ವಹಣೆ ಬಗ್ಗೆ ಐ.ಸಿ.ಎ.ಆರ್.-ಐ.ಐ.ಎಸ್.ಆರ್, ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದರು. ತರಬೇತಿ ಕಾರ್ಯಾಗಾರವನ್ನು ಐ.ಸಿ.ಎ.ಆರ್. ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಡಾ. ಎಂ. ಎಸ್. ಶಿವಕುಮಾರ್, ವಿಜ್ಞಾನಿಗಳು, ಐ. ಸಿ. ಎ. ಆರ್.-ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಸ್ವಾಗತಿಸಿದರು. ಐ. ಸಿ. ಎ. ಆರ್.-ಐ. ಐ. ಎಸ್. ಆರ್. ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ. ಹೊನ್ನಪ್ಪ ಆಸಂಗಿ ವಂದಿಸಿದರು. ಈ ತರಬೇತಿಯಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಮೈಸೂರು, ಮಂಡ್ಯ ಹಾಗೂ ಗುಲ್ಬರ್ಗಾಜಿಲ್ಲೆಗಳಿಂದ 100 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.