
ವಿರಾಜಪೇಟೆ ಮೇ 31 NEWS DESK : ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಬಿ.ಎಸ್.ಸಿ ವಿದ್ಯಾರ್ಥಿನಿ ಪಿ.ವಿ.ವಿನಿಷಾ ಆರು ಸೆಮಿಸ್ಟರ್ ಪರೀಕ್ಷೆಗಳಲ್ಲಿ 4200 ಅಂಕಗಳಿಗೆ 4086 ಅಂಕಗಳನ್ನು ಪಡೆದು ಶೇ. 97.29 ರಷ್ಟು ಸಾಧನೆ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಆರನೇ ರ‍್ಯಾಂಕ್ ಪಡೆದು ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿನಿಷಾ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್ ಹಾಗೂ ಕೆ.ವಿದ್ಯಾ ದಂಪತಿಗಳ ಪುತ್ರಿ. ಪ್ರಸ್ತುತ ವಿನಿಷಾ ಮೈಸೂರಿನ ಜೆ. ಎಸ್. ಎಸ್. ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ ವಿನಿಷಾ ಸಾಧನೆಯನ್ನು ಸೆಂಟ್ ಆನ್ಸ್ ಪದವಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಶ್ಲಾಘಿಸಿದ್ದಾರೆ.








