ಮಡಿಕೇರಿ ಜೂ.3 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಗೋಣಿಕೊಪ್ಪಲಿನ ನದಿ ಪುನಶ್ಚೇತನ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಶಾಸಕ ಪೊನ್ನಣ್ಣ, ಘನತ್ಯಾಜ್ಯ ನಿರ್ವಹಣೆಗೆ ನಿರ್ದೇಶನ ನೀಡಿ ಈ ನದಿ ಮೊದಲಿನಂತೆ ನೀರು ಹರಿಯುವಂತಾಗಬೇಕು. ಈ ಕೆಲಸಕ್ಕೆ ಹಲವಾರು ಸಂಸ್ಥೆಗಳು ಕೈಜೋಡಿಸಿದ್ದು, ಕ್ಲೀನ್ ಕೂರ್ಗ್ ಇನಿಶಿಯೇಟಿವ್ ಸಂಸ್ಥೆ ವೈಜ್ಞಾನಿಕ ತಡೆ ಟ್ರಾಶ್ ಬ್ಯಾರಿಯರ್ ಯನ್ನು ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಗೋಣಿಕೊಪ್ಪ ಪಂಚಾಯಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ ಹಾಜರಿದ್ದರು.