


ಮಡಿಕೇರಿ ಜೂ.7 NEWS DESK : ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಖಾಲಿ ಇರುವ 5585 ಕ್ಕೂ ಹೆಚ್ಚು ಕ್ಲರಿಕಲ್ ಹುದ್ದೆಗಳು ಹಾಗೂ 3499 ಕ್ಕೂ ಹೆಚ್ಚು ಪ್ರೊಬೇಶನರಿ ಆಫ಼ೀಸರ್ ಹುದ್ದೆಗಳ ನೇಮಕಾತಿಗೆ ಐಬಿಪಿಎಸ್ ಸಂಸ್ಥೆ ಅರ್ಜಿ ಆಹ್ವಾನಿಸಿದೆ. ಒಟ್ಟು 9000 ಕ್ಕೂ ಹೆಚ್ಚು ಹುದ್ದೆಗಳಿದ್ದು ಹಾಸನ ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಪದವೀಧರ ವಿದ್ಯಾರ್ಥಿಗಳು ಜೂನ್, 27 ರೊಳಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ https://www.ibps.in/ ವೀಕ್ಷಿಸಬಹುದಾಗಿದೆ. ಈ ಹುದ್ದೆಗಳ ಹಾಗೂ ಮುಂಬರುವ ಎಲ್ಲಾ ಬ್ಯಾಂಕ್ ನೇಮಕಾತಿ ಪರೀಕ್ಷೆಗಳ ತಯಾರಿಗಾಗಿ ಜೂನ್, 19 ರಂದು ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್ ನಲ್ಲಿ ಉಚಿತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆನರಾ ಬ್ಯಾಂಕ್‍ನ ನಿವೃತ್ತ ಜನರಲ್ ಮ್ಯಾನೇಜರ್ ಹಾಗೂ ಸಂಪನ್ಮೂಲ ವ್ಯಕ್ತಿಗಳು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆಸಕ್ತ ಪದವೀಧರ ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ 8660217739 ಸಂಪರ್ಕಿಸಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್ ಕಾರ್ಯದರ್ಶಿ ತಿಳಿಸಿದ್ದಾರೆ.