ಕಡಂಗ ಜೂ.17 NEWS DESK : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕಡಂಗದಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.
ವಿಶ್ವ ದಲ್ಲಿ ಶಾಂತಿ, ಸೌಹಾರ್ದತೆ ನೆಲಸಲಿ ಎಂದು ಸಮುದಾಯ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬದ್ರಿಯ ಸುನ್ನಿ ಮಸೀದಿಯ ಈದ್ ನಮಾಜಿಗೆ ಖತೀಬ್ ಸತ್ತಾರ್ ಅಹಸನಿ ಮತ್ತು ಮೊಯದ್ದೀನ್ ಜುಮಾ ಮಸೀದಿಯ ಈದ್ ನಮಾಜಿಗೆ ರಫೀಕ್ ಲತೀಫಿ ನೇತೃತ್ವ ವಹಿಸಿದರು.
ಬದ್ರಿಯ ಜಮಾಹತ್ ಅಧ್ಯಕ್ಷ ಉಸ್ಮಾನ್, ಮೊಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ, ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.