ಸೋಮವಾರಪೇಟೆ ಜೂ.18 NEWS DESK : ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚಕರ ಸಂಘದ ವತಿಯಿಂದ ಲೋಕ ಕಲ್ಯಾಣಕ್ಕಾಗಿ ವರದ ಶಂಕರ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ಸಂಘದ ಕಾರ್ಯದರ್ಶಿ ಬಸವ ಕುಮಾರ ಶಾಸ್ತ್ರಿ ಪುರೋಹಿತ್ವದಲ್ಲಿ ಅರ್ಚನೆ, ಅಷ್ಟೋತ್ತರ ಹಾಗೂ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಎಫ್.ಸಿ.ಹಿರೇಮಠ್, ನಾಡಿನೆಲ್ಲೆಡೆ ಸುಭಿಕ್ಷೆ ನೆಲೆಸಬೇಕು, ಶಾಂತಿ, ನೆಮ್ಮದಿ ಇರಬೇಕು. ಕಾಲಕಾಲಕ್ಕೆ ಮಳೆ, ಬೆಳೆ ಚೆನ್ನಾಗಿ ಆಗಬೇಕು ಎಂದು ಲೋಕ ಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಅಮ್ಮತ್ತಿ ಮಹೇಶ್, ಖಜಾಂಚಿ ಅಭಿಮಠ ಮಹೇಶ್, ಪದಾಧಿಕಾರಿಗಳಾದ ಚಂದ್ರಶೇಖರ್, ವೀರಯ್ಯ, ನಂದೀಶ್, ತ್ರಿಶಂಕು ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಅರ್ಚಕರುಗಳು ಪಾಲ್ಗೊಂಡಿದ್ದರು.