
ನಾಪೋಕ್ಲು ಜೂ.20 NEWS DESK : ಕಕ್ಕಬೆಯ ನಾಲಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಮದ ಪರದಂಡ ವಿಠಲ, ಕೋಡಿಮಣಿಯಂಡ ರವಿ ಹಾಗೂ ಪಟ್ಟೆಮನೆ ಕೃಷ್ಣ ನೋಟ್ ಪುಸ್ತಕ ನೀಡಿದರು.
ಇವರ ಕೊಡುಗೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಎಂ. ಹೆಚ್ ರಝಿನ, ಅತಿಥಿ ಶಿಕ್ಷಕರಾದ ಕೆ.ಪಿ.ಗೌರಮ್ಮ , ಬಿ.ಎಸ್.ಶಾರಿಕ ಸ್ಮರಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.










