
ಮಡಿಕೇರಿ ಜೂ.20 NEWS DESK : ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ (ಐ.ಎಮ್.ಎ) 2024ನೇ ಸಾಲಿನ ‘ಕರ್ನಾಟಕ ರಾಜ್ಯ ಶಾಖೆ ವೈದ್ಯರ ದಿನ’ ಪ್ರಶಸ್ತಿಗೆ ಮಡಿಕೇರಿಯ ಡಾ.ಮೋಹನ್ ಅಪ್ಪಾಜಿ ಅವರು ಆಯ್ಕೆಯಾಗಿದ್ದಾರೆ.
ಜು.1 ರಂದು ಬೆಂಗಳೂರಿ ಮೆಡಿಕಲ್ ಕಾಲೇಜು ಆವರಣದಲ್ಲಿ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಮೋಹನ್ ಅಪ್ಪಾಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.










