ಮಡಿಕೇರಿ ಜೂ.21 NEWS DESK : ಹೆಣ್ಣು ಜಾನಪದ ಸಾಹಿತ್ಯ ರಚನೆಗೆ ಸ್ಫೂರ್ತಿಯಾಗಿದ್ದು ತನ್ನ ಸಂಸಾರದಲ್ಲಿ ಶಕ್ತಿಯಾಗಿದ್ದವಳು ಎಂದು ನಾಪೋಕ್ಲು ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲೆ ಡಾ.ಕಾವೇರಿ ಅಭಿಪ್ರಾಯಪಟ್ಟರು.
ವಿರಾಜಪೇಟೆ ಸರಾಕರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ನಡೆದ ಜಾನಪದ ಸಾಹಿತ್ಯದಲ್ಲಿ ಸ್ತ್ರೀ ಕುರಿತ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಹೆಣ್ಣು ಸರಿ ಸಮನಾಗಿ ಹೊಲ ಗದ್ದೆಗಳಲ್ಲಿ ದುಡಿದು, ಮನೆಯ ಜವಾಬ್ದಾರಿಯನ್ನು ಹೊತ್ತು, ಸಂಸಾರ ಕುಟುಂಬಗಳ ನಿರ್ವಹಿಸುವಲ್ಲಿ ಹೆಣ್ಣು ಮೇಲುಗೈ ಸಾಧಿಸುವಳು, ಧಾರ್ಮಿಕ ಆಚರಣೆಗಳಲ್ಲಿ, ಸಭೆ ಸಮಾರಂಭಗಳು ನಿರ್ವಹಿಸುವಲ್ಲಿ ಹೆಣ್ಣಿನ ಪಾತ್ರ ಮುಖ್ಯವಾಗಿರುತ್ತದೆ. ಅನೇಕ ಜಾನಪದ ಗೀತೆಗಳಲ್ಲಿ ಹೆಣ್ಣಿನ ತ್ಯಾಗ, ನಿಷ್ಠೆ, ಧೈರ್ಯವನ್ನು ಪ್ರಶಂಸಿಸಲಾಯಿತು. ದಾಂಪತ್ಯದಲ್ಲಿ ಹೆಣ್ಣಿನ ಉದಾರತೆಯನ್ನು ಜಾನಪದ ಗೀತೆಗಳು ತಿಳಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಸಿ.ದಯಾನಂದ, ಜಾನಪದವು ಸಾಹಿತ್ಯದ ಮೂಲ ಬೇರು ಮತ್ತು ಪ್ರೇರಣೆ ಆಗಿದೆ ಎಂದು ವಿವರಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ.ಬಸವರಾಜು ಪ್ರಸ್ತಾವಿಕ ಭಾಷಣ ಮಾಡಿದರೆ. ಸಹಾಯಕ ಪ್ರಾಧ್ಯಾಪಕ ರಘುರಾಜ್ ಸ್ವಾಗತಿಸಿದರು, ಉಪನ್ಯಾಸಕರಾದ ಡಾ. ಪ್ರಭು ವಂದಿಸಿದರು. ವಿದ್ಯಾರ್ಥಿ ಅಜಿತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಇದ್ದರು.