ಬೆಂಗಳೂರು ಜೂ.21 NEWS DESK : ಬಳ್ಳಾರಿಯ ಜೆ.ಎಸ್.ಡಬ್ಲ್ಯೂ ಟೌನ್ ಶಿಪ್ ನಲ್ಲಿ ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು. ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗಾಗಿ ಯೋಗ ಒಂದು ಪರಿಣಾಮಕಾರಿ ಸಾಧನ. ಇಂದು ಅಂತಾರಾಷ್ಟ್ರೀಯ ಯೋಗ ದಿನ. ಇಡೀ ಜಗತ್ತು ಭಾರತದ ಕೊಡುಗೆಯಾದ ಯೋಗದ ಮಹತ್ವವನ್ನು ಅರಿತು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.











