ವಿರಾಜಪೇಟೆ ಜೂ.21 NEWS DESK : ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ತೋಮರ (ತೋರ) ಗ್ರಾಮದಲ್ಲಿ 2019ರಲ್ಲಿ ಸಂಭವಿಸಿದ ಭೂ ಕುಸಿತ ಪ್ರದೇಶಗಳಿಗೆ ವಿರಾಜಪೇಟೆ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ರಾಮಚಂದ್ರ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದರು.
ಭೂ ಕುಸಿತ ಪ್ರದೇಶಗಳ ಸಮೀಪದ ಮನೆಗಳಿಗೆ ಭೇಟಿ ನೀಡಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಮುಂಜಾಗ್ರತ ಕ್ರಮ ವಹಿಸುವಂತೆ ನಿವಾಸಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ವಿರಾಜಪೇಟೆ ಕಂದಾಯ ಇಲಾಖೆಯ ಪರಿವೀಕ್ಷಕರಾದ ಎಂ.ಎಲ್.ಹರೀಶ್, ಗ್ರಾಮ ಆಡಳಿತಾಧಿಕಾರಿ ಅನುಶಾ, ನೂತನ್, ಅಜಯ್ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ