ಮಡಿಕೇರಿ ಜೂ.25 NEWS DESK : ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವ ಪ್ರಯುಕ್ತ “ಅಮೃತ ಸೋಮೇಶ್ವರ” ಸಾಕ್ಷ್ಯ ಚಿತ್ರ ಲೋಕಾಪ೯ಣೆಗೊಂಡಿತು.
ಸೋಮೇಶ್ವರ ದೇವಾಲಯದ ಸಭಾ ಭವನದಲ್ಲಿ ಆಯೋಜಿತ ಸಭಾ ಕಾಯ೯ಕ್ರಮದಲ್ಲಿ ಅಮೃತ ಸೋಮೇಶ್ವರ ಸಾಕ್ಷ್ಯ ಚಿತ್ರವನ್ನು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಲೋಕಾಪ೯ಣೆ ಮಾಡಿದರು.ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಸಾಕ್ಷ್ಯ ಚಿತ್ರ ನಿಮಿ೯ಸಿ, ನಿದೇ೯ಶಿಸಿದ ಪತ್ರಕತ೯ ಅನಿಲ್ ಹೆಚ್.ಟಿ ಮತ್ತು ರೀನಾ ಅನಿಲ್ ದಂಪತಿಯನ್ನು ಈ ಸಂದಭ೯ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಹೆಸರಾಂತ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಮಾಜಿ ಅಧ್ಯಕ್ಷ ಜಿ.ಸೋಮೇಶ್, ನಿದೇ೯ಶಕ ಎಸ್.ಡಿ.ವಿಜೇತ್, ದೇವಿಬಳಗದ ಅಧ್ಯಕ್ಷೆ ರತಿ ನಂದಕುಮಾರ್, ಚಿತ್ರಲೇಖ ಸನ್ಮಾನಿಸಿ ಗೌರವಿಸಿದರು.
ಶ್ರೀ ಸೋಮೇಶ್ವರ ದೇವಾಲಯ ಇತಿಹಾಸ, ದೇವಾಲಯ ಮಹತ್ವದ ಕುರಿತ 45 ನಿಮಿಷಗಳ ಸಾಕ್ಷ್ಯ ಚಿತ್ರ ದೇವಾಲಯಕ್ಕೆ ಸಂಬಂಧಿಸಿದಂತೆ ಭವಿಷ್ಯಕ್ಕೆ ಉತ್ತಮ ದಾಖಲೆಯಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹೇಳಿದರು.