ಮಡಿಕೇರಿ ಜೂ.26 NEWS DESK : ಡಾ.ಶಾನ್ ರಾಕ್ ಪ್ರತಿಷ್ಠಾನದ ವತಿಯಿಂದ “ಸೋನಿಕ್ ಸೊಲೇಸ್ 5.0′ ಶೀರ್ಷಿಕೆಯಡಿಯಲ್ಲಿ ಮಡಿಕೇರಿಯ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಧ್ವನಿ ಚಿಕಿತ್ಸೆ (ಸೌಂಡ್ ಹೀಲಿಂಗ್) ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಾಗೃಹದ ಉಪಾಧೀಕ್ಷಕ ಸಂಜಯ್ ದತ್ತಿ, ಪ್ರತಿಷ್ಠಾನದ ಪ್ರಯತ್ನಗಳನ್ನು ಶ್ಲಾಘಿಸಿದರು.
ಡಾ.ಶರಣ್ ರಾಕ್ ಮಾತನಾಡಿ, ಅಪರಾಧಿ ನಡವಳಿಕೆ ಹೆಚ್ಚಾಗಿ ಅಂತರ್ಗತ ಲಕ್ಷಣವಾಗಿರದೇ ಸನ್ನಿವೇಶಾನುಸಾರ ಸಾಂದರ್ಭಿಕವಾಗಿ ಬೇರು ಬಿಟ್ಟಿರುತ್ತದೆ. ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ತಮ್ಮ ಭಾವನೆಗಳನ್ನು ನಿಭಾಯಿಸುವ ಮತ್ತು ಹಿಂದು ಮುಂದು ನೋಡದೇ ಆವೇಶಭರಿತ ಆಯ್ಕೆಗಳನ್ನು ತಪ್ಪಿಸುವ ಸಾಧನಗಳೊಂದಿಗೆ ಸಜ್ಜುಗೊಳಿಸಲಲಾಗುವುದು ಎಂದರು.
ಡಾ.ಶರಣ್ ರಾಕ್ ಪ್ರತಿಷ್ಟಾನವು ಈ ಕಾರ್ಯಾಗಾರವನ್ನೂ ಹೊರತಾದ ವಿಸ್ತ್ರತ ಉದ್ದೇಶವನ್ನು ಹೊಂದಿದೆ. ಗ್ರಾಮೀಣ ಭಾಗದ ಆಸಕ್ತ ಕಲಾವಿದರನ್ನು ತರಬೇತುಗೊಳಿಸುವುದರ ಮೂಲಕ ಸಶಕ್ತಿಕರಿಸುವುದು ಮತ್ತು ಸಂಗೀತವನ್ನು ವೃತ್ತಿಯಾಗಿ ಅನುಸರಿಸಲು ಅವಕಾಶ ಒದಗಿಸುವ ಉದ್ದೇಶವನ್ನು ಹೊಂದಿದೆ. ಗುಣಪಡಿಸುವಿಕೆ, ಕ್ರಿಯಾಶೀಲತೆ, ಶಾಂತಿ ಮತ್ತು ಸಮುದಾಯ ಪ್ರಜ್ಞೆ ಸಂಗೀತ ಮತ್ತು ಧ್ವನಿ ಚಿಕಿತ್ಸೆಯನ್ನು ಉತ್ತೇಜಿಸಲು ಸಂಗೀತ ಶಕ್ತಿಯ ಮೇಲಿನ ನಂಬಿಕೆಯು ಕೂಡ ಪಾರ್ಕಿನ್ಸನ್ ಕಾಯಿಲೆ, ಮಕ್ಕಳಲ್ಲಿ ಗ್ರಹಿಕಾ ದೌರ್ಬಲ್ಯ (ಡಿಪ್ಲೆಕ್ಸಿಯಾ) ಮತ್ತಿತರ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಸಹಾಯಕವಾಗಲಿದೆ. ಹೀಗಾಗಿ ಕ್ಯಾನ್ಸರ್ ರೋಗಿಗಳು, ಸರ್ಕಾರಿ ಶಾಲೆಗಳು ಮತ್ತು ಹಿರಿಯ ನಾಗರಿಕರ ವಸತಿಗಳು ಸೇರಿದಂತೆ ವಿವಿಧ ಸಮುದಾಯಗಳಿಗೆ ಚಿಕಿತ್ಸಾ ಅಧಿವೇಶನಗಳನ್ನು ಮತ್ತು ತಾಳವಾದ್ಯ ವಾದಕರು ಮತ್ತು ನರ್ತಕರ ಸಂವಹನಾತ್ಮಕ ಸಮ್ಮೇಳನಗಳನ್ನು ಡಾ.ಶರಣ್ ರಾಕ್ ಪ್ರತಿಷ್ಠಾನವು ಆಯೋಜಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು (ಮಡಿಕೇರಿ)ವಿನ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಹಾಜರಿದ್ದರು.