ನಾಪೋಕ್ಲು ಜೂ.29 NEWS DESK : ನಾಪೋಕ್ಲು ಕೊಡವ ಸಮಾಜ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಲಾಗಿದ್ದು ಸಂಚಾರ ಸಮಸ್ಯೆಯನ್ನು ಪರಿಹರಿಸಲಾಗಿದೆ.ರಸ್ತೆಯಲ್ಲಿ ಹೊಂಡ ಗುಂಡಿಗಳಾಗಿದ್ದು ಸಂಚಾರಕ್ಕೆ ತೊಡಕು ಉಂಟಾಗಿ ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಆರ್ಐಡಿಎಲ್ ವತಿಯಿಂದ 3.70 ಲಕ್ಷ ವೆಚ್ಚದಲ್ಲಿ 52 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ.
ರಸ್ತೆ ನಿರ್ಮಾಣದಿಂದಾಗಿ ಮುಂದಿನ 15 ದಿನಗಳು ವಾಹನ ಸಂಚಾರ ನಿಷೇಧಿಸಿ. ನಾಡಕಚೇರಿಗೆ ತೆರಳಲು ಬೈಪಾಸ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ವರದಿ : ದುಗ್ಗಳ ಸದಾನಂದ.