ನಾಪೋಕ್ಲು ಜೂ.29 NEWS DESK : ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸರಕಾರ ಹಲವು ನಿಯಮಗಳನ್ನು ಜಾರಿಗೊಳಿಸಿದೆ ಎಂದು ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ಕುಂಜಿಲದ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ವಿಷಯ ವಿವರಣೆಯನ್ನು ಅವರು ನೀಡಿದರು. ಸಮಾಜದಲ್ಲಿ ಜರುಗುತ್ತಿರುವ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳು ಹಾಗೂ ಸಂಚಾರಿ ನಿಯಮಗಳ ಕುರಿತು ಮಾಹಿತಿ ನೀಡಿದರು.
ಅಂತರ್ಜಾಲ ವಂಚನೆಗಳನ್ನು ವಿವರಿಸಿ ಎಚ್ಚರಿಕೆ ನೀಡಿದರು. ತಂಬಾಕು ಉತ್ಪನ್ನಗಳು ಮಾರಕ ಆದರೂ ಅದನ್ನು ಮಾರಾಟ ಮಾಡುತ್ತಿದ್ದಾರೆ.ಆದರೆ ವಿದ್ಯಾರ್ಥಿಗಳು ಅವುಗಳ ಮೊರೆ ಹೋಗಬಾರದು ಎಂದರು.
ಮಾದಕ ವಸ್ತುಗಳ ಬಳಕೆ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ರೈಂ ಠಾಣಾಧಿಕಾರಿ ಶ್ರೀಧರ್, ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ನಿರ್ವಾಹಕ ಅಧಿಕಾರಿ ಶಾಹಿದ್ ಅಲಿ, ಮುಖ್ಯೋಪಧ್ಯಾಯಿನಿ ಕವಿತಾ, ಅಧ್ಯಾಪಕವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ : ದುಗ್ಗಳ ಸದಾನಂದ.