Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ*
  • *ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*
  • *ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*
  • ಮಡಿಕೇರಿ : ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್  ಭೇಟಿ : ಪರಿಶೀಲನೆ 
  • *ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ : ಮಂಜಪ್ಪ ಮಾಲ್ದಾರೆ ಅಭಿಮತ*
  • *ಬಿ.ಎನ್.ಚರಿಷ್ಮಾಗೆ 5ನೇ ರ‍್ಯಾಂಕ್*
  • *ಕೂಡಿಗೆ : ವೃತ್ತಿಪರ ಮಾರ್ಗದರ್ಶನ ಪಡೆಯಲು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕರೆ*
  • *ರಂಗಭೂಮಿಯು ಸಮಾಜದ ಜೀವಂತ ದರ್ಪಣ : ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ*
  • *ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀ ರಾಮನವಮಿ : ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು*
  • *ಗೋಣಿಕೊಪ್ಪ : ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ರಾಮನವಮಿ ಆಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಮರಜೀವಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಮರಜೀವಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ*

ಜುಲೈ 5, 20244 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.4 NEWS DESK : ಭಾರತೀಯ ಜನಸಂಘದ ಸ್ಥಾಪಕ ಅಧ್ಯಕ್ಷ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದಿರುವ ಸಂಪ್ರದಾಯ ಕುಟುಂಬದಲ್ಲಿ ಜನನ ಹೊಂದಿರುವ ಶ್ಯಾಮ್ ಪ್ರಸಾದ್ ಮುಖರ್ಜಿಯವರು 1901 ಜುಲೈ 6 ರಂದು ಜನಿಸಿದರು.
ತಂದೆ ಅಶುತೋಷ್ ಫೋಷ್, ತಾಯಿ ಜೋಗಮಯ್ಯ ದೇವಿ. ಭಾರತೀಯ ಸಂಪ್ರದಾಯ ಕುಟುಂಬದಲ್ಲಿ ಬೆಳೆದಿರುವ ಇವರ ತಂದೆ ಭಾರತೀಯ ಸಂಸ್ಕೃತಿಯನ್ನು ಅತೀಯಾಗಿ ಪಾಲಿಸುತ್ತಿದ್ದರು.
ಇವರ ತಂದೆ ಖ್ಯಾತ ವಕೀಲರಾಗಿ, ನ್ಯಾಯಧೀಶರಾಗಿ ಕಲ್ಕತ್ತದ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ತಂದೆಯನ್ನು ಸರಸ್ವತಿ ಪುತ್ರ ಎಂದೂ ಕರೆಯುತ್ತಿದ್ದರೂ. ಕಾರಣ ಇವರ ಮನೆಯಲ್ಲಿ 85,000 ಸಾವಿರಕ್ಕೂ ಹೆಚ್ಚು ಪುಸ್ತಕ ಸಂಗ್ರಹ ಮಾಡಿದ್ದರು. ಇಂದಿಗೂ ಕಲ್ಕತ್ತದ ನ್ಯಾಷನಲ್ ಗ್ರಂಥಾಲಯದಲ್ಲಿ ಪತ್ಯೇಕವಾಗಿ ಸಂಗ್ರಹಿಸಿ ಇಡಲಾಗಿದೆ.
ತಂದೆಯವರ ಮಾರ್ಗದರ್ಶನದಂತೆ ರಾಷ್ಟ್ರೀಯ ಸಂಪ್ರದಾಯ, ರಾಷ್ಟ್ರೀಯತೆಯನ್ನು ಇವರು ಮೈಗೂಡಿಸಿಕೊಂಡಿದ್ದರು. ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಕಲ್ಪನೆ ಕನಸು-“ನಾನು ದೊಡ್ಡವನಾದ ಮೇಲೆ ಬಹು ದೊಡ್ಡ ವ್ಯಕ್ತಿಯಾಗಬೇಕು. ಸಾಮಾಜಿಕ ಹಿತಕ್ಕಾಗಿ ಸಮಾಜದ ಸುಧಾರಣೆಗೆ ನನ್ನನ್ನು ತೊಡಗಿಸಿಕೊಳ್ಳಬೇಕೆಂಬ ಹಂಬಲ ಅವರಲಿತ್ತು.
ಶಿಕ್ಷಣದ ತುಡಿತ, ಸುಧಾರಣೆಯ ಮನೋಭಾವ ಮತ್ತು ಇವರ ಅನುಭವವನ್ನು ಮನಗಂಡ ಕಲ್ಕತದ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯನಾಗಿ 1924ರಲ್ಲಿ ನೇಮಕ ಮಾಡಿತ್ತು. 1929ರಲ್ಲಿ ಪರಿಷತ್ ಸದಸ್ಯರಾಗಿ ನೇಮಕಗೊಳ್ಳುತ್ತಾರೆ. ಕೇವಲ 34ನೇ ವಯಸ್ಸಿನಲ್ಲಿ ಕಲ್ಕತ್ತದ ವಿಶ್ವವಿದ್ಯಾಲಯದ ಉಪ ಕುಲಪತಿಯಾಗುತ್ತಾರೆ.
ಇವರ ವೈಚಾರಿಕತೆ ಇವರ ಬದ್ದತೆಯ ಬಗ್ಗೆ ಸ್ವತಃ ಮಹಾತ್ಮಗಾಂಧಿಯವರಿಗೆ ಅಷ್ಟು ಪ್ರಮಾಣದ ವಿಶ್ವಾಸವಿತ್ತು. ಸ್ವಾತಂತ್ರ್ಯ ಸಿಕ್ಕಿದ ಸಂದರ್ಭ ದೇಶ ವಿಭಜನೆ ಖಚಿತವಾಗುತ್ತದೆ. ಅಂತ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಅನ್ನು ನಮ್ಮ ದೇಶದೊಳಗೆ ಉಳಿಸಿಕೊಳ್ಳಬೇಕು ಎಂದು ಅದಕ್ಕೆ ಶ್ಯಾಮ್ ಪ್ರಸಾದ್ ಮುಖರ್ಜಿಯವರು ತಯಾರಿ ಮಾಡಿಕೊಳ್ಳುತ್ತಾರೆ. ಪತ್ರಗಳ ಮೂಲಕ ಅಂದಿನ ಪ್ರಧಾನಿ ನೆಹರು, ಗಾಂಧಿಜಿಯವರಿಗೆ, ಸರ್ದಾರ್ ವಲ್ಲಬಾಯಿ ಪಟೇಲ್ ಅವರಿಗೆ, ರಾಜಗೋಪಾಲ್ ನವರಿಗೆ ಬ್ರಿಟಿಷ್ ಸರಕಾರಕ್ಕೆ ಪತ್ರಗಳ ಮೂಲಕ ವಿಚಾರ ತಿಳಿಸುತ್ತಾರೆ. ಜನರಿಗೆ ಜಾಗೃತಿ ಮೂಡಿಸಿರುತ್ತಾರೆ. ಇದರ ಪರಿಣಾಮವಾಗಿಯೇ ಪಶ್ವಿಮ ಬಂಗಾಳ, ಪಂಜಾಬ್ ಅನ್ನು ಭಾರತದ ಭೂಪಟದಲ್ಲಿ ಕಾಣುವಂತಾಗಿದೆ.
ತಮ್ಮ ವರ್ಚಸ್ಸು, ತಮ್ಮ ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೇ ಜನಹಿತ ಕಾಪಾಡಲು ಸಾಧ್ಯವಾಗದ ಸಂದರ್ಭದಲ್ಲಿ ಆದರಿಂದ ದೂರ ಸರಿದು ಪರ್ಯಾಯ ಮಾರ್ಗದಲ್ಲಿ ಮುಂದುವರೆಯುತ್ತಿದ್ದ ಮಹಾನ್‍ವ್ಯಕ್ತಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ.
ಸ್ವತಂತ್ರ್ಯ ಬಂದ ನಂತರ ಕೇಂದ್ರದಲ್ಲಿ ರಾಷ್ಟ್ರೀಯ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಇವರು ಕೂಡ ಸಂಸದರಾಗಿ ಆಯ್ಕೆಯಾಗಿರುತ್ತಾರೆ. ಸರ್ದಾರ್ ವಲ್ಲಬಾಯಿ ಪಟೇಲ್‍ನವರು ನೆಹರು ಅವರಿಗೆ ಶಿಪಾರಸ್ಸು ಮಾಡಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ವರಣ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಸೂಚಿಸುತ್ತಾರೆ. ಹಿಂದೂ ಮಹಾಸಭಾದ ಪ್ರತಿನಿಧಿಯಾಗಿ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿ ಕೇಂದ್ರ ಸಂಪುಟದಲ್ಲಿ ಸೇರಿಕೊಳ್ಳುತ್ತಾರೆ. ಶ್ಯಾಮ್ ಪ್ರಸಾದ್ ಮುಖರ್ಜಿಯವರು ಕೈಗಾರಿಕ ಸಚಿವರಾಗಿದ್ದ ಸಂದರ್ಭದಲ್ಲೇ ಬೆಂಗಳೂರಿನ ಹೆಚ್.ಎ.ಎಲ್ ಸ್ಥಾಪೆಯಾಗಿದ್ದು, ಅನೇಕ ದೇಶಿಯ ಕಾರ್ಖನೆಗಳ ಸ್ಥಾಪನೆಗೆ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಕೊಡುಗೆ ಅಪಾರವಾದದ್ದು.
ಭಾರತ ಸ್ವವಾಲಂಭನೆ ಆಗಬೇಕು, ಸ್ವಾತಂತ್ರ್ಯದ ನಂತದಲ್ಲಿ ಇಲ್ಲಿ ಕೈಗಾರಿಕೆ ಚಟವಟಿಕೆಗಳು ಹೆಚ್ಚು ಹೆಚ್ಚು ಆಗಬೇಕು ಎಂಬ ಕನಸು ಅವರಲಿತ್ತು. ಅದಕ್ಕೆ ತಕ್ಕ ವಾತಾವರಣ ನಿರ್ಮಾಣ ಮಾಡಲು ಹೆಚ್ಚು ಒತ್ತು ನೀಡುತ್ತಿದ್ದರು.
ಶ್ಯಾಮ್ ಪ್ರಸಾದ್ ಮುಖರ್ಜಿಯವರು ಸಂಪುಟದಿಂದ ಹೊರಬಂದ ನಂತರ ನಾನೊಂದು ಸ್ವಂತ ಪಕ್ಷವನ್ನು ಕಟ್ಟಬೇಕು, ಭಾರತದ ಹಿತವನ್ನು ಕಾಪಾಡಲು ಬಹು ಸಂಖ್ಯಾತರಿಗೆ ನ್ಯಾಯ ಒದಗಿಸಬೇಕು ಎಂಬ ಅವರ ತುಡಿತ ಇತ್ತು.
1950ರಲ್ಲಿ ಸರಕಾರದ ಕಾರ್ಯವೈಖರಿ ಅವರಿಗೆ ಒಪ್ಪಿಗೆ ಆಗುತ್ತಿರಲಿಲ್ಲ. ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರಬಂದರು.
ಈ ಪರಿಸ್ಥಿತಿ ಬದಲಾಗಬೇಕೆಂದರೆ ರಾಜಕೀಯಕ್ಕೆ ನಮ್ಮ ಅಗತ್ಯವಿದೆ ಎಂದೂ ಗುರುಜಿಯವರೊಂದಿಗೆ ಚರ್ಚೆ ಮಾಡುತ್ತಾರೆ. ಗುರುಜಿಯವರಿಗೆ ಸ್ಪಷ್ಟವಾಗಿ ಶ್ಯಾಮ್ ಪ್ರಸಾದ್‍ನವರಿಗೆ ಹೇಳುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದೂ ಕೂಡ ರಾಜಕೀಯವಾಗಿ ಪರಿವರ್ತನೆಗೊಳ್ಳುವುದಿಲ್ಲ. ಸಂಘ ಇರುವುದು ಹಿಂದೂಗಳ ಸಂಘಟನೆಗಾಗಿ ಮತ್ತು ಪ್ರತಿಯೊಬ್ಬರಲ್ಲು ರಾಷ್ಟ್ರೀಯತೆಯನ್ನು ಬೆಳೆಸುವ ದೃಷ್ಟಿಯಿಂದ ಮಾತ್ರವೇ ನಾವು ರಾಜಕೀಯಕ್ಕೆ ಬಂದರೆ ನಮ್ಮ ಉದ್ದೇಶ ವಿಫಲವಾಗುತ್ತದೆ. ಆದ್ದರಿಂದ ಯಾರಿಗೆ ರಾಜಕೀಯದಲ್ಲಿ ಆಸಕ್ತಿ ಇದೆಯೋ ಅವರುಗಳು ಬಂದು ತಮ್ಮ ಸಂಸ್ಕಾರವನ್ನು ಪಡೆದಂತಹ ಪ್ರತ್ಯೇಕವಾದ ರಾಜಕೀಯ ಪಕ್ಷವನ್ನು ಆರಂಭಿಸಿದರೆ ಸೂಕ್ತ ಎಂದು ಸಲಹೆ ನೀಡುತ್ತಾರೆ.
ಸುದೀರ್ಘ ಚರ್ಚೆಯ ನಂತರ ಶ್ಯಾಮ್ ಪ್ರಸಾದ್ ಮುಖರ್ಜಿಯವರು 1951 ಅಕ್ಟೋಬರ್‍ನಲ್ಲಿ ಜಲಂದರ್ ಭಾರತೀಯ ಜನಸಂಘ ಪಕ್ಷದ ಉದಯಕ್ಕೆ ಕಾರಣವಾಗುತ್ತಾರೆ. ಸ್ಥಾನಪಕರಾಗುತ್ತಾರೆ.
ಆ ಸಂದರ್ಭದಲ್ಲಿ ಸಂಘದಲ್ಲಿ ಸಕ್ರಿಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಸುಂದರ್‍ಸಿಂಗ್ ಭಂಡಾರಿ, ಜಗದೀಶ್ ಪ್ರಸಾದ್, ಮುಖ್ಯವಾಗಿ ದಿನ್ ದಯಾಲ್ ಉಪಾಧ್ಯಯನವರನ್ನು ಜನ ಸಂಘದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಯಿತು.
ಇದರ ಪರಿಣಾಮವಾಗಿ ಜನ ಸಂಘದ ಕಾರ್ಯವ್ಯಾಪ್ತಿ ದೇಶದ ಉದ್ದಗಲಕ್ಕೂ ಹರಡಲು ಕಾರಣವಾಯಿತು. ಅಂದಿನ ಸಂದರ್ಭದಲ್ಲಿ ನೆಹರು ಅವರನ್ನು ಎದುರಿಸಲು ಅವರ ವಿರುದ್ಧ ಮಾತನಾಡಲು ಅವರ ಮಾತಿಗೆ ಪ್ರತಿಮಾತು ಕೊಡಲು ಸಮರ್ಥವಾಗಿದ್ದ ವಿರೋಧ ಪಕ್ಷದಲ್ಲಿ ಶ್ಯಾಮ್ ಮುಖರ್ಜಿಯಾಗಿದ್ದರು.
ದೇಶ ವಿಭನೆಯಾಗಿದ್ದ ಸಂದರ್ಭದಲ್ಲಿ ಭಾರತದ ಪಾಲಿಗೆ ಸೇರಿದ ಎಲ್ಲಾ ಭೂ ಭಾಗದಲ್ಲಿ ಹಲವಾರು ರಾಜ್ಯಗಳಲ್ಲಿ ಅನೇಕ ಮಹರಾಜರು ತಮ್ಮದೇ ಪಾಲುಗಾರಿಕೆಯನ್ನು ಕಟ್ಟಿಕೊಂಡು ಆಡಳುತ್ತಿದ್ದರು.
ಸರ್ದಾರ್ ವಲ್ಲಬಾಯಿ ಪಟೇಲ್ ಅವರ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ವಿಲಿನ ಮಾಡಲಾಯಿತು. ಸರ್ದಾರ್ ವಲ್ಲಬಾಯಿ ಪಟೇಲ್‍ರಿಗೆ ಸೂಕ್ತವಾದ ಸಲಹೆ ಸೂಚನೆಯನ್ನು ಕೊಟ್ಟು ಅವರ ಮೂಲಕ ಅನೇಕ ಕೆಲಸವನ್ನು ಮಾಡಿಸುವಂತಹ ಜಾಣ್ಮೆಯನ್ನು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರು ತೋರಿಸುತ್ತಿದ್ದರು.
ಆದರೆ ಒಂದೇ ಒಂದು ರಾಜ್ಯ ಜಮ್ಮು ಕಾಶ್ಮೀರವನ್ನು ಭಾರತದ ಸುಪರ್ತಿಗೆ ತೆಗೆದುಕೊಳ್ಳಲು ಸಾಧ್ಯವಾಗತ್ತಿರಲಿಲ್ಲ. ಅಲ್ಲಿಗೆ 370ರ ವಿಧಿ ಪ್ರತ್ಯೇಕ ಪ್ರಧಾನಿ, ಪ್ರತ್ಯೇಕ ಧ್ವಜಾ, ಪ್ರತ್ಯೇಕ ಸಂವಿಧಾನ ನೀಡಿದ ಬಗ್ಗೆ ಶ್ಯಾಮ್ ಪ್ರಸಾದ್ ಅವರಿಗೆ ತುಂಬ ನೋವು ತಂದ ಕ್ಷಣ ಆಗಿತ್ತು. ಸುಪ್ರಿಂ ಕೋರ್ಟ್‍ನ ತೀರ್ಪುಗಳು ಕೂಡ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. ಕಾಶ್ಮಿರದ ವಿಲಿನದಲ್ಲಿ ದೊಡ್ಡ ಕಂದಕ ಸೃಷ್ಟಿಯಾಯಿತು.
ಭಾರತದ ಅವಿಭಾಜ್ಯ ಅಂಗ ಕಾಶ್ಮಿರ ಎಂದೂ ಐತಿಹಾಸಿಕ ಚಳುವಳಿಯನ್ನು ಕೂಡ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಶುರು ಮಾಡಿದರು. ಏಕ್‍ದೇಶ್ ಮೇ ದೋ ವಿಧಾನ್, ದೋ ಪ್ರದಾನ್, ದೋ ನಿಶಾನ್, ನಹಿ ಚಲೇಗ ನಡಿ ಚಲೇಗ ಎಂಬ ಐತಿಹಾಸಿಕ ಹೋರಾಟದ ಘೋಷಣೆಯಾಗಿದೆ. ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಪ್ರಧಾನಿ, ಎರಡು ಧ್ವಜಾ ನಡೆಯಲ್ಲ ಎಂದೂ ಸಾವಿರಾರೂ ಕಾರ್ಯಕರ್ತರನ್ನು ಸಂಘಟಿಸುತ್ತಾರೆ. ಪ್ರತಿಭಟಿಸುತ್ತಾರೆ, ಚಳುವಳಿ ನಡೆಸುತ್ತಾರೆ.
ಸ್ವತಃ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಜಮ್ಮು, ಶ್ರೀನಗರದ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಾರೆ. ಅಲ್ಲಿ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ತೀರ್ವವಾದ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಆ ಸಂದರ್ಭದಲ್ಲಿ ಜಮ್ಮ ಕಾಶ್ಮೀರದಲ್ಲಿ ದೊಡ್ಡ ಚಳವಳಿ ಪ್ರತಿಭಟನೆಗೆ ಭಾಗವಹಿಸಲು ದೆಹಲಿಯಿಂದ ತಮ್ಮ ಪ್ರಯಾಣವನ್ನು ಬೆಳೆಸುತ್ತಾರೆ. ದಾರಿಯುದ್ದಕ್ಕೂ ಪಂಜಾಬ್ ಮೂಲಕ ಅಂಬಾಲ, ಕರ್ಣಾಲ್, ಪಠಣ್‍ಕೊಟ್ ಎಲ್ಲಾ ಕಡೆ ಸಾವಿರಾರು ಜನರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇವರ ಉದ್ದೇಶ ಮತ್ತು ಬೇಡಿಕೆ ಒಂದೇ ಆಗಿತ್ತು. ಜಮ್ಮು ಕಾಶ್ಮೀರವನ್ನು ಭಾರತಕ್ಕೆ ವಿಲಿನ ಮಾಡಬೇಕೆಂಬುದಾಗಿತ್ತು. ಆದರೆ ಅವರಿಗೆ ಅನೇಕರು ಸಲಹೆ ಕೊಡುತ್ತಾರೆ. ಶ್ರೀನಗರಕ್ಕೆ ಹೋಗಬೇಡಿ ಅಲ್ಲಿನ ಪರಿಸ್ಥಿತಿ ಸರಿ ಇಲ್ಲ ಎಂದು ಆದರೂ ಅದನ್ನು ಲೆಕ್ಕಿಸದೆ ಜಮ್ಮವಿಗೆ ಬಂದು ಶ್ರೀ ನಗರಕ್ಕೆ ಬಂದಾಗ ಅಲ್ಲಿನ ಸರಕಾರ ಅವರನ್ನು ಬಂಧನ ಮಾಡುತ್ತಾರೆ. ನಾನು ಲೋಜಸಭಾ ಸಂಸದ ನನಗೆ ಹೋಗಲು ಅನುಮತಿ ಕೊಡಿ ಎಂದು ಬೇಡಿಕೊಂಡರು. ಅದಕ್ಕೆ ಕ್ಯಾರೆ ಮಾಡದೆ ಅವರನ್ನು ಬಂಧಿಸುತ್ತಾರೆ. ಬಂಧಿಸಿ ಅವರನ್ನು ನಿಶಾಗ್‍ಭಾಗ್‍ನಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಇಡುತ್ತಾರೆ. ಇವರಿಗೆ ಮಾನಸಿಕ ಹಿಂಸೆಯನ್ನು ನೀಡಿ, ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ. ಎಲ್ಲಾ ರೀತಿಯ ತೊಂದರೆಯನ್ನು ಆ ಸಂದರ್ಭದಲ್ಲಿ ಅನುಭವಿಸುತ್ತಾರೆ.
ಇವರ ಬಂಧನದ ವಿರುದ್ಧ ದೇಶಾದ್ಯಂತ ಪ್ರತಿಭನೆಯಾಗುತ್ತದೆ. 40 ದಿನಗಳ ಕಾಲ ಆ ಚಿಕ್ಕದಾದ ಕೋಣೆಯಲ್ಲಿ ಬಂಧಿತರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರು ದಿನ ಕಳೆದಂತೆ ಆರೋಗ್ಯದಲ್ಲಿ ಏರುಪೇರು ಶುರುಮಾಡಿದಾಗ ಅವರನ್ನು ಅಲ್ಲಿಂದ 10 ಕಿ.ಮೀ ದೂರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುತ್ತಾರೆ. ಆಸ್ಪತ್ರೆಯಲ್ಲೆ ಕೊನೆಯುಸಿರು ಬಿಡುತ್ತಾರೆ. ಆದರೆ ಅವರ ಸಾವು ಇಂದಿಗೂ ನಿಗೂಢವಾಗಿದೆ.
ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾಡುವ ಹೋರಾದಲ್ಲಿ ಭಾರತೀಯ ಜನ ಸಂಘದ ಸ್ಥಾಪಕ ಅಧ್ಯಕ್ಷ ತನ್ನನ್ನು ತಾನು ಬಲಿದಾನ ಮಾಡಿಕೊಂಡರು.
ದೇಶದ ಅಖಂಡತೆಗಾಗಿ ಜನಸಂಘ ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಯಾವ ಕನಸನ್ನು ಕಂಡಿದ್ದರು ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕೆಂದು ಅದು ಇವಗಾ ಸಾಕರವಾಗಿದೆ. 370ನೇ ವಿಧಿ ರದ್ದಾಗಿದೆ. ಆ ಮಹಾತ್ಮನ ಜನುಮ ದಿನದಂದು ಕೋಟಿ ನಮನಗಳು.

ಲೇಖನ : ಪಿ.ಎಂ.ರವಿ
             ಮಡಿಕೇರಿ
             ದೂರವಾಣಿ ಸಂಖ್ಯೆ : 9972073295

ಪಿ.ಎಂ.ರವಿ

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ*

ಮಾರ್ಚ್ 27, 2026

*ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 27, 2026

*ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*

ಮಾರ್ಚ್ 27, 2026

*ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಮಾ.27 NEWS DESK : ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ನಾಗರಿಕರಲ್ಲಿ ಭಯಮುಕ್ತ ವಾತಾವರಣ ಮೂಡಿಸುವ ಸಲುವಾಗಿ  ನಾಪೋಕ್ಲು…

*ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*

ಮಾರ್ಚ್ 27, 2026

ಮಡಿಕೇರಿ : ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್  ಭೇಟಿ : ಪರಿಶೀಲನೆ 

ಮಾರ್ಚ್ 27, 2026

*ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ : ಮಂಜಪ್ಪ ಮಾಲ್ದಾರೆ ಅಭಿಮತ*

ಮಾರ್ಚ್ 27, 2026

*ಬಿ.ಎನ್.ಚರಿಷ್ಮಾಗೆ 5ನೇ ರ‍್ಯಾಂಕ್*

ಮಾರ್ಚ್ 27, 2026

*ಕೂಡಿಗೆ : ವೃತ್ತಿಪರ ಮಾರ್ಗದರ್ಶನ ಪಡೆಯಲು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕರೆ*

ಮಾರ್ಚ್ 27, 2026

*ರಂಗಭೂಮಿಯು ಸಮಾಜದ ಜೀವಂತ ದರ್ಪಣ : ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ*

ಮಾರ್ಚ್ 27, 2026

*ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀ ರಾಮನವಮಿ : ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು*

ಮಾರ್ಚ್ 27, 2026

*ಗೋಣಿಕೊಪ್ಪ : ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ರಾಮನವಮಿ ಆಚರಣೆ*

ಮಾರ್ಚ್ 27, 2026

*ಕಣಿವೆ ಶ್ರೀ ರಾಮಲಿಂಗೇಶ್ವರನ ವೈಭವದ ಬ್ರಹ್ಮ ರಥೋತ್ಸವ*

ಮಾರ್ಚ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.