Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ಹಿಂದೂ ಮಲಯಾಳಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ*
  • *ಸ್ಕೌಟ್ಸ್ ಮತ್ತು ಗೈಡ್ಸ್ ಚಾರಣಿಗರಿಗೆ ಪ್ರಮಾಣ ಪತ್ರ ವಿತರಣೆ : ಚಾರಣದಿಂದ ಸಾಹಸ ಮನೋಭಾವ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ : ಈರಮಂಡ ಹರಿಣಿ ವಿಜಯ್ ಅಭಿಮತ*
  • test
  • *‘ವಿಶ್ವ ಶ್ರವಣ ದಿನ’ ಪ್ರಯುಕ್ತ ಬೀದಿ ನಾಟಕದ ಮೂಲಕ ಜಾಗೃತಿ*
  • *ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ)*
  • *ಸಂಸದರಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಪುಸ್ತಕ ಬಿಡುಗಡೆ*
  • *ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿ ಸಭೆ*
  • *ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು*
  • *ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಕುಮಾರಸ್ವಾಮಿ-ಸಿದ್ದರಾಮಯ್ಯ ಸಾಥ್: ಮೂರು ದಿನಗಳ ಬಳಿಕ ಬೆಂಗಳೂರಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಯಾಣಿಕರು*
  • *ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಾಫಿ ಬೆಳೆ ಮಾರಾಟಕ್ಕೆ ಪಾಲುದಾರರ ಸಹಯೋಗ : ಕಾಫಿ ಮಂಡಳಿಯಿಂದ ವಿನೂತನ ಯತ್ನ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

*ಕಾಫಿ ಬೆಳೆ ಮಾರಾಟಕ್ಕೆ ಪಾಲುದಾರರ ಸಹಯೋಗ : ಕಾಫಿ ಮಂಡಳಿಯಿಂದ ವಿನೂತನ ಯತ್ನ*

ಜುಲೈ 10, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಬೆಂಗಳೂರು ಜು.10 NEWS DESK : ವಿಶ್ವದ ಕಾಫಿ ಬೆಳೆಯುವ ಅಗ್ರಗಣ್ಯ ರಾಷ್ಟ್ರಗಳಾದ ಬ್ರೆಜಿಲ್‌ ಮತ್ತು ಕೊಲಂಬಿಯಾದಲ್ಲಿ ಜಾರಿಯಲ್ಲಿರುವ ಮಾದರಿಯನ್ನು ಭಾರತದಲ್ಲಿಯೂ ಅಳವಡಿಸಿಕೊಂಡು ಕಾಫಿ ಬೆಳೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಪಾಲುದಾರರನ್ನು ಒಗ್ಗೂಡಿಸುವ ವಿನೂತನ ಪ್ರಯತ್ನಕ್ಕೆ ಕಾಫಿ ಮಂಡಳಿಯು ಕೈ ಹಾಕಿದೆ. ಕಾಫಿ ಬೆಳೆಗಾರರರು, ಸಂಸ್ಕರಣೆದಾರರು, ಸಂಗ್ರಹಕಾರರು, ಮಾರಾಟಗಾರರು, ರೋಸ್ಟರ್ಸ್, ರಾಫ್ತುದಾರರು, ಕೆಫೆ ಚೈನ್ಗಳ ಮಾಲೀಕರನ್ನು ಒಟ್ಟುಗೂಡಿಸಿ ಹೊರ ದೇಶಗಳ ಮಾದರಿಯಲ್ಲಿ ಸ್ಥಳೀಯವಾಗಿಯೇ ಬ್ರ್ಯಾಂಡ್ ಬಿಲ್ಡಿಂಗ್ ಮಾಡಲು ಕಾಫಿ ಮಂಡಳಿಯು ದಿಟ್ಟ ಹೆಜ್ಜೆ ಇಟ್ಟಿದೆ.
ಇದರ ಮೊದಲ ಹಂತವಾಗಿ ದೇಶದ ಎಲ್ಲ ಪಾಲುದಾರರಿಗೆ ತಮ್ಮ ಸಲಹೆಗಳನ್ನು ನೀಡಲು ಮಂಡಳಿಯು ಆಹ್ವಾನ ನೀಡಿದ್ದು ಸ್ಥಳಿಯವಾಗಿ ದೊರೆತಿರುವ ಪ್ರೋತ್ಸಾಹದಿಂದಲೇ ಬ್ರೆಜಿಲ್ನ ಕಾಫಿ ವಿಶ್ವದಲ್ಲಿ ತುಂಬಾ ಜನಪ್ರಿಯತೆ ಗಳಿಸಿದೆ. ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ದೇಶವಾದ ಬ್ರೆಜಿಲ್‌ ನಲ್ಲಿ ಅಲ್ಲಿನ ಸರ್ಕಾರ ಅಲ್ಲಿನ ಜನರಿಗೆ ಕಾಫಿಯ ಮಹತ್ವವನ್ನು ಸಾರುವ ವ್ಯಾಪಕ ಪ್ರಚಾರ ನಡೆಸಿ ಅಲ್ಲಿ ಸೇವನೆಯನ್ನು ಮೊದಲು ಹೆಚ್ಚಿಸಲಾಯಿತು. ನಂತರ ಬ್ರೆಜಿಲ್‌ ಕಾಫಿ ವಿದೇಶದಲ್ಲೂ ಜನಪ್ರಿಯವಾಯಿತು. ಈಗ ಭಾರತದಲ್ಲೂ ಅದೇ ಮಾದರಿಯ ಪ್ರಚಾರ ಮಾಡುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ.
ವಿಶ್ವದಲ್ಲಿ ಅತ್ಯಂತ ಹೆಚ್ಚು ಕಾಫಿ ಬೆಳೆಯುವ ಬ್ರೆಜಿಲ್‌ ಮತ್ತು ಎರಡನೇ ಸ್ಥಾನದಲ್ಲಿರುವ ಕೊಲಂಬಿಯಾದ ಕಾಫಿಗಿಂತ ಗುಣಮಟ್ಟದಲ್ಲಿ ಭಾರತೀಯ ಕಾಫಿಯು ಉತ್ಕೃಷ್ಟವಾಗಿದೆ. ಭಾರತೀಯ ಕಾಫಿಯು ಪ್ರೀಮಿಯಂ ಬೆಲೆಗೆ ವಿದೇಶಗಳಲಿ ಮಾರಾಟವಾಗುತಿದ್ದು ಭಾರತ ಕಾಫಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಆರನೇ ಸ್ಥಾನ ಹೊಂದಿದೆ. ಆದರೆ ಭಾರತೀಯ ಕಾಫಿಯ ಹಿರಿಮೆ ಇಲ್ಲಿನ ಸ್ಥಳಿಯರಿಗೆ ಇನ್ನೂ ಗೊತ್ತಿಲ್ಲ.
ಆ ದೇಶಗಳಲ್ಲಿ ಕಾಫಿಯ ಮೌಲ್ಯವನ್ನು ಸ್ಥಳೀಯವಾಗಿ ಉತ್ತಮ ರೀತಿಯಲ್ಲಿ ತಿಳಿಸಿಕೊಡಲಾಗಿದೆ. ಆದ್ದರಿಂದ ವಿಶ್ವ ಮನ್ನಣೆ ಗಳಿಸಲು ಸಾಧ್ಯವಾಗಿದೆ.ಕೇವಲ ಕಾಫಿ ಬೋರ್ಡ್ ನಿಂದ ಬೆಳೆ ಮತ್ತು ಮಾರಾಟದ ಸಂಬಂಧ ಅಮೂಲಾಗ್ರ ಬದಲಾವಣೆ ತರಲು ಸಾಧ್ಯವಿಲ್ಲ. ಎಲ್ಲ ಪಾಲುದಾದರೂ ಒಟ್ಟುಗೂಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ಕಾಫಿ ಮತ್ತು ಸಹ ಉತ್ಪನ್ನಗಳನ್ನು ಇನ್ನಷ್ಟು ಮುನ್ನೆಲೆಗೆ ತರಬಹುದಾಗಿದೆ.
ಮಾರ್ಕ್ ಆಫ್ ಕ್ವಾಲಿಟಿ ಎನ್ನುವ ಪರಿಕಲ್ಪನೆಯನ್ನು ತರುವುದರ ಮೂಲಕ ಬ್ರೆಜಿಲ್ ದೇಶ ಪ್ರಪಂಚದಲ್ಲೇ ಕಾಫಿಗೆ ಸಂಬಂಧಿಸಿದಂತೆ ಹೆಸರನ್ನು ಮಾಡಿದೆ. ಅದೇ ಮಾದರಿಯಲ್ಲಿ ಇಲ್ಲೂ ಕೂಡ ಗುಣಮಟ್ಟಕ್ಕೆ ಒತ್ತು ನೀಡಬೇಕಿದೆ. ಒಟ್ಟು 10 ವಿಚಾರಗಳನ್ನು ಕಾಫಿ ಬೆಳೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ದೇಶದ ಎಲ್ಲ ಪಾಲುದಾರರ ಸಮಯವನ್ನು ಇತ್ತೀಚಿಗೆ ನಡೆದ ಮೊದಲ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಚಾರವಾಗಿ ಅತಿ ಶೀಘ್ರದಲ್ಲೇ ತಮ್ಮ ಎಲ್ಲ ಅಹವಾಲು ಮತ್ತು ಪರಿಕಲ್ಪನೆಗಳನ್ನು ನೀಡಿ ಒಟ್ಟಿಗೆ ಕೆಲಸ ಮಾಡುವುದಾಗಿದೆ.ಆ ಮೂಲಕ ಕಾಫಿಯ ಆಂತರಿಕ ಬಳಕೆ ಹೆಚ್ಚಿಸಿ ಮತ್ತು ಜಾಗೃತಿ ಮೂಡಿಸಬಹುದಾಗಿದೆ.
ದೇಶದಲ್ಲಿ ಉತ್ಪಾದನೆ ಆಗುತ್ತಿರುವ 3.65 ಲಕ್ಷ ಟನ್‌ ಕಾಫಿಯಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ರಫ್ತಾಗುತ್ತಿದೆ. ದೇಶದ ಆಂತರಿಕ ಬಳಕೆ ಒಂದು ಲಕ್ಷ ಟನ್‌ ಗಿಂತಲೂ ಕಡಿಮೆ ಇದೆ. ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ತಲಾ ಕಾಫಿ ಬಳಕೆ ಇತರ ಕಾಫಿ ಉತ್ಪಾದಕ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಟವಾಗಿದೆ. ಹೀಗಾಗಿ ಕಾಫಿ ಬ್ರ್ಯಾಂಡ್‌ ಬಿಲ್ಡಿಂಗ್‌ ಮೂಲಕ ಕಾಫಿ ಬಳಕೆ ಹೆಚ್ಚಿಸಬೇಕಿರುವುದು ಉದ್ಯಮದ ದೃಷ್ಟಿಯಿಂದ ಅನಿವಾರ್ಯವೂ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ ಅವರು ಕಾಫಿ ಮಂಡಳಿಯು ಆಯೋಜಿಸ್ದ ಸಭೆಯಲ್ಲಿ ತಾವು ಭಾಗವಹಿಸಿದ್ದಾಗಿಯೂ ಮುಂದಿನ ಸಭೆಯಲ್ಲಿ ಸ್ಪಷ್ಟ ರೂಪು ರೇಷೆಗಳನ್ನು ನಿರ್ಧರಿಸುವ ಸಾದ್ಯತೆ ಇದೆ ಎಂದು ಹೇಳಿದ್ದಾರೆ. ಆಂತರಿಕ ಬಳಕೆ ಹೆಚ್ಚಿದಾಗ ಸಹಜವಾಗಿಯೇ ವಿದೇಶಗಳಲ್ಲೂ ಹೆಚ್ಚಿನ ಮನ್ನಣೆ ದೊರೆಯುವ ಜತೆಗೇ ಕಾಫಿ ದರವೂ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಿಸಿದರು.

ವರದಿ : ಕೋವರ್‌ ಕೊಲ್ಲಿ ಇಂದ್ರೇಶ್‌ 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ಹಿಂದೂ ಮಲಯಾಳಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ*

ಮಾರ್ಚ್ 4, 2026

*ಸ್ಕೌಟ್ಸ್ ಮತ್ತು ಗೈಡ್ಸ್ ಚಾರಣಿಗರಿಗೆ ಪ್ರಮಾಣ ಪತ್ರ ವಿತರಣೆ : ಚಾರಣದಿಂದ ಸಾಹಸ ಮನೋಭಾವ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ : ಈರಮಂಡ ಹರಿಣಿ ವಿಜಯ್ ಅಭಿಮತ*

ಮಾರ್ಚ್ 4, 2026

test

ಮಾರ್ಚ್ 4, 2026

*ಸ್ಕೌಟ್ಸ್ ಮತ್ತು ಗೈಡ್ಸ್ ಚಾರಣಿಗರಿಗೆ ಪ್ರಮಾಣ ಪತ್ರ ವಿತರಣೆ : ಚಾರಣದಿಂದ ಸಾಹಸ ಮನೋಭಾವ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ : ಈರಮಂಡ ಹರಿಣಿ ವಿಜಯ್ ಅಭಿಮತ*

ಮಾರ್ಚ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ  NEWS DESK ಮಾ.4 : ಪ್ರಕೃತಿಯ ನಡುವಿನ ಚಾರಣ ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು…

test

ಮಾರ್ಚ್ 4, 2026

*‘ವಿಶ್ವ ಶ್ರವಣ ದಿನ’ ಪ್ರಯುಕ್ತ ಬೀದಿ ನಾಟಕದ ಮೂಲಕ ಜಾಗೃತಿ*

ಮಾರ್ಚ್ 3, 2026

*ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ)*

ಮಾರ್ಚ್ 3, 2026

*ಸಂಸದರಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಪುಸ್ತಕ ಬಿಡುಗಡೆ*

ಮಾರ್ಚ್ 3, 2026

*ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿ ಸಭೆ*

ಮಾರ್ಚ್ 3, 2026

*ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು*

ಮಾರ್ಚ್ 3, 2026

*ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಕುಮಾರಸ್ವಾಮಿ-ಸಿದ್ದರಾಮಯ್ಯ ಸಾಥ್: ಮೂರು ದಿನಗಳ ಬಳಿಕ ಬೆಂಗಳೂರಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಯಾಣಿಕರು*

ಮಾರ್ಚ್ 3, 2026

*ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ*

ಮಾರ್ಚ್ 3, 2026

*ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ*

ಮಾರ್ಚ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.