ಮಡಿಕೇರಿ ಜು.10 NEWS DESK : ಬುದ್ಧ ಪ್ರತಿಷ್ಠಾನ ಕೊಡಗು ಶಾಖೆ ವತಿಯಿಂದ 102ನೇ ವಕೀಲರ ದಿನದ ಅಂಗವಾಗಿ ಜು.13 ರಂದು ವಕೀಲರಿಗೆ ಗೌರವ ಸಮರ್ಪಣೆ ಮತ್ತು ಬುದ್ಧ ಪೂರ್ಣಿಮೆ ಅಂಗವಾಗಿ ಶಕ್ತಿ ವೃದ್ಧಾಶ್ರಮದ ಮಾತೃಪಿತೃಗಳಿಗೆ ವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ ಬುದ್ಧ ಪ್ರತಿಷ್ಠಾನದ ಜಿಲ್ಲಾ ಧಮ್ಮಾಚಾರಿ ಹೆಚ್.ಪಿ.ಶಿವಕುಮಾರ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಶಕ್ತಿ ವೃದ್ಧಾಶ್ರಮದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಎ.ನಿರಂಜನ್ ಉದ್ಘಾಟಿಸಲಿದ್ದು, ಮುಖ್ಯ ಭಾಷಣಕಾರರಾಗಿ ವಕೀಲ ಕೆ.ಆರ್.ವಿದ್ಯಾಧರ್ ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕರಾದ ವನಿತ ಚಂದ್ರಮೋಹನ್, ಸೋಮವಾರಪೇಟೆ ವಕೀಲರಾದ ಬಿ.ಇ.ಜಯೇಂದ್ರ, ಮಡಿಕೇರಿ ಅಡ್ವೊಕೇಟ್ ನಾಗೇಶ್ಕುಮಾರ್, ಕುಶಾಲನಗರ ಪುರಸಭೆಯ ನೂತನ ಕಾನೂನು ಸಲಹೆಗಾರ ಕೆ.ಸಿ.ಶಿವಮೂರ್ತಿ, ಕುಶಾಲನಗರ ಎಪಿಪಿ ಹೆಚ್.ಎನ್.ಜಾನಕಿ, ವಕೀಲರಾದ ದಿವ್ಯ ನಂಜಪ್ಪ, ಜೆ.ಆರ್.ತುಳಸಿ, ವಿರಾಜಪೇಟೆ ಕ.ದ.ಸಂ.ಸ.ರಾಜ್ಯ ಸಮಿತಿ ಸದಸ್ಯ ಪಳನಿ ಪ್ರಕಾಶ್, ಶಕ್ತಿವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್, ಬುದ್ಧ ಪ್ರತಿಷ್ಠಾನದ ರವಿ, ಡಿಎಸ್ಎಸ್ನ ಹೆಚ್.ಟಿ.ಕಾವೇರಪ್ಪ, ರವೀಂದ್ರ, ನಾಗಪ್ಪ ಹಾಗೂ ಹೆಚ್.ಎ.ಗಣೇಶ್ ಭಾಗವಹಿಸಲಿದ್ದಾರೆ ಎಂದು ಹೆಚ್.ಪಿ.ಶಿವಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.