ಮಡಿಕೇರಿ NEWS DESK : ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಖ್ಯಾತವಾಗಿರುವ ಕೊಡಗಿನ ಜಲಪಾತಗಳಲ್ಲಿ ಒಂದು. ಕೊಡಗಿನ ಹಲವಾರು ಜಲಪಾತಗಳಲ್ಲಿ ಒಂದಾಗಿರುವ ಈ ಜಲಪಾತ ತುಂಬಾ ರೋಮಾಂಚನಕಾರಿಯಾಗಿದೆ. ನಿಶ್ಯಬ್ದ ಕಾಡಿನಲ್ಲಿ ನೆಲೆಗೊಂಡಿರುವ, ಹರಿಯುವ ನೀರಿನ ಶಬ್ಧವು, ಪಕ್ಷಿ ಮತ್ತು ಪ್ರಕೃತಿಯ ಸಮ್ಮೋಹನಗೊಳನ್ನು ಒಳಗೊಂಡಿದೆ. ಮಡಿಕೇರಿಯಿಂದ ಸುಮಾರು 50.ಕಿಮಿ ದೂರದಲ್ಲಿ ಇರುವ ಈ ಜಲಪಾತ,ನಾಗರಹೊಳೆ ಪ್ರಾಣಿ ರಕ್ಷಣಧಾಮದ ಕಾಡಿನಲ್ಲಿ ಸ್ಥಾಪಿತವಾಗಿದೆ.ಎಲ್ಲಾ ಕಾಲದಲ್ಲೂ ನೀರಿನಿಂದ ತುಂಬಿರುವ ಈ ಜಲಪಾತ ಮಳೆಗಾಲದಲ್ಲಿ ನೋಡಲು ತುಂಬಾ ಸುಂದರವಾಗಿರುತ್ತದೆ.ಈ ಜಲಪಾತವು ಪ್ರಸಿದ್ಧವಾದ ಪ್ರವಾಸಿತಾಣವಾಗಿದೆ.ಬ್ರಹ್ಮಗಿರಿ ಬೆಟ್ಟದಿಂದ ಉಗಮವಾಗುವ ಈ ಜಲಪಾತ ಲಕ್ಷಣತೀರ್ಥ ನದಿಗೆ ಸೇರ್ಪಡೆಯಾಗುತ್ತದೆ. ಪುರಾಣದಲ್ಲಿ ಬರುವ ಹಾಗೆ ರಾಮಾಯಣದ ಯುಗದಲ್ಲಿ ರಾಮನು ತನ್ನ ವನವಾಸದ ಕಾಲದಲ್ಲಿ ಈ ಕಾಡಿನಲ್ಲಿ ತಂಗಿದ್ದನು ಲಕ್ಷಣನು ರಾಮನಿಗೆ ನೀರು ತರಲು ಹೊರಟಾಗ ನೀರು ಎಲ್ಲೂ ಸಿಗದೆ ಬಾಣವನ್ನು ಕಾಡಿಗೆ ಬಿಟ್ಟನು.ಬಾಣ ಮುಟ್ಟಿದ ಜಾಗದಿಂದ ಜಲಪಾತವು ಸೃಷ್ಟಿಯಾಗುತ್ತದೆ.ಈ ಜಲಪಾತವೇ ಈಗಿನ ಇರ್ಪು ಜಲಪಾತ.ಜಲಪಾತವಿರುವ ಬೆಟ್ಟದ ಕೆಳಭಾಗದಲ್ಲಿ ರಾಮೇಶ್ವರ ದೇವಸ್ತಾನವಿದೆ.ಪುರಾಣದ ಪ್ರಕಾರ ಈ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಸ್ವಯಂ ಶ್ರೀರಾಮನೇ ಸ್ಥಾಪಿಸಿದನೆಂಬ ನಂಬಿಕೆ ಇದೆ.ಶಿವರಾತ್ರಿಯ ಸಮಯದಲ್ಲಿ ಈ ದೇವಸ್ಥಾನವು ಬಹಳಷ್ಟು ಭಕ್ತಾದಿಗಳನ್ನು ಆಕರ್ಶಿಸುತ್ತದೆ.