ಮಡಿಕೇರಿ ಜು.11 NEWS DESK : ಜಗತ್ತಿನಲ್ಲಿಯೇ ರೋಟರಿ ಸಂಸ್ಥೆಯು ಅತ್ಯಂತ ಕ್ರಿಯಾಶೀಲ ಸೇವಾ ಸಂಸ್ಥೆಯಾಗಿ ಖ್ಯಾತವಾಗಿದ್ದು, ರೋಟರಿಯ ಸಾಮಾಜಿಕ ಹೊಣೆಯನ್ನು ಅತ್ಯಂತ ಯಶಸ್ಸಿಯಾಗಿ ಮುಂದುವರೆಸುವ ಮಹತ್ವದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲಿದೆ ಎಂದು ಮೈಸೂರಿನ ಉದ್ಯಮಿ, ರೋಟರಿ ಪ್ರಮುಖ ಯಶಸ್ವಿ ಸೋಮಶೇಖರ್ ಕರೆ ನೀಡಿದ್ದಾರೆ. ನಗರದ ಗೌಡ ಸಮಾಜದ ಸಭಾಂಗಣದಲ್ಲಿ ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷರಾಗಿ ಪೊನ್ನಚ್ಚನ ಮಧುಸೂದನ್ ಮತ್ತು ಕಾಯ೯ದಶಿ೯ಯಾಗಿ ಕಟ್ಟೆಮನೆ ಸೋನಜಿತ್ ಅವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ಜಾಗತಿಕವಾಗಿ 119 ವಷ೯ಗಳ ಭವ್ಯ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ಪ್ರತೀ ವಷ೯ ಕೋಟ್ಯಾಂತರ ಜನರಿಗೆ ಸೇವೆಯ ಮೂಲಕ ನೆರವು ನೀಡುತ್ತಲೇ ಬಂದಿದೆ, ರೋಟರಿ ಸದಸ್ಯರು ನೀಡುವ ದೇಣಿಗೆ ಜಗತ್ತಿನ ಯಾವುದೋ ಒಂದು ಭಾಗದಲ್ಲಿ ಸಂತ್ರಸ್ಥರಿಗೆ ತಲುಪುತ್ತಿದೆ ಎಂದು ಹೇಳಿದ ಸೋಮಶೇಖರ್, ರೋಟರಿ ಸಂಸ್ಥೆಯಲ್ಲಿ ಪ್ರತೀ ಜುಲೈನಲ್ಲಿ ಆಡಳಿತ ಮಂಡಳಿಯ ಬದಲಾವಣೆ ಮಾದರಿಯಾಗಿದ್ದು ಪ್ರಕೖತ್ತಿ ನಿಯಮವಾದ ಸೂಯೋ೯ದಯ ಮತ್ತು ಸೂಯ೯ಸ್ತಮನಾದಂತೆಯೇ ರೋಟರಿಯಲ್ಲಿಯೂ ಅಧಿಕಾರದ ಬದಲಾವಣೆಯಾಗುವುದು ಅಭಿವೖದ್ದಿಯ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು. ರೋಟರಿ ಸಂಸ್ಥೆಯು ಇಂದು ಸಾಮಾಜಿಕ ಜವಬ್ದಾರಿಯುಳ್ಳ, ಸಮಾಜಸೇವೆಯ ಕಳಕಳಿಯುಳ್ಳ ನಿಸ್ವಾಥ೯ ಮನೋಭಾವದ ಸಮಾಜದ ಎಲ್ಲಾ ವಗ೯ಕ್ಕೆ ಸೇರಿರುವ ಸದಸ್ಯರನ್ನು ಹೆಚ್ಚಾಗಿ ಬಯಸುತ್ತಿದೆ ಎಂದು ಅಭಿಪ್ರಾಯಪಟ್ಟ ಸೋಮಶೇಖರ್, , ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷೆ ಮಹಿಳೆಯೇ ಅಗಿರುವುದರಿಂದ ಮಹಿಳಾ ಸದಸ್ಯರ ಸೇಪ೯ಡೆಗೂ ಗಮನ ನೀಡಿ ಎಂದು ಸಲಹೆ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, 65 ಸದಸ್ಯ ಬಲದ ಮಿಸ್ಟಿ ಹಿಲ್ಸ್ 19 ವಷ೯ಗಳಲ್ಲಿ ಸೇವಾಸಾಧನೆಗಾಗಿ ಖ್ಯಾತವಾಗಿದ್ದು ಮತ್ತಷ್ಟು ನೂತನ ಯೋಜನೆಗಳ ಮೂಲಕ ಈ ಸೇವಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು. ರೋಟರಿ ಸಹಾಯಕ ಗವನ೯ರ್ ದೇವಣಿರ ಕಿರಣ್ ಮತ್ತು ವಲಯ ಸೇನಾನಿ ಅನಿತಾ ಪೂವಯ್ಯ, ಈ ವಷ೯ದ ರೋಟರಿಯ ಸೇವಾ ಯೋಜನೆಗಳ ಮಾಹಿತಿ ನೀಡಿದರು, ಎಸ್, ಎಂ, ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾತಾ೯ಸಂಚಿಕೆಯನ್ನೂ ಈ ಸಂದಭ೯ ಅತಿಥಿಗಳು ಬಿಡುಗಡೆಗೊಳಿಸಿದರು. ರೋಟರಿ ಸಂಸ್ಥೆಗೆ ಮೇಜರ್ ಡೋನರ್ ಆದ ಮಿಸ್ಟಿ ಹಿಲ್ಸ್ ನಿದೇ೯ಶಕ ಡಾ, ಚೆರಿಯಮನೆ ಪ್ರಶಾಂತ್ ಅವರನ್ನು ಗೌರವಿಸಲಾಯಿತು, ನೂತನ ಸದಸ್ಯರಾಗಿ ಮನೋಜ್ ಕುಮಾರ್ ಅವರನ್ನು ಸೇಪ೯ಡೆಗೊಳಿಸಲಾಯಿತು. ಮಿಸ್ಟಿ ಹಿಲ್ಸ್ ನ ನಿಕಟಪೂವ೯ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ ವೇದಿಕೆಯಲ್ಲಿದ್ದರು, ರೋಟರಿ ಜಿಲ್ಲೆ 3181 ನ ಮಾಜಿ ಗವನ೯ರ್ ಗಳಾದ ರವೀಂದ್ರಭಟ್, ಸುರೇಶ್ ಚಂಗಪ್ಪ, ಡಾ, ರವಿ ಅಪ್ಪಾಜಿ, ನಿಯೋಜಿತ ಗವನ೯ರ್ ಸತೀಶ್ ಬೋಳಾರ್ ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು, ಕಟ್ಟೆಮನೆ ಸೋನಜಿತ್ ವಂದಿಸಿದ ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ಪ್ರಮುಖರಾದ ಬಿ, ಜಿ, ಅನಂತಶಯನ, ಅನಿಲ್ ಹೆಚ್,ಟಿ, ಬಿ,ಕೆ, ರವೀಂದ್ರರೈ, ಕಪಿಲ್ ಕುಮಾರ್, ಕೆ,ಎಂ,ಪೂಣಚ್ಚ, ಲೀನಾ ಪೂವಯ್ಯ, ನಿವ೯ಹಿಸಿದರು.