ಮಡಿಕೇರಿ ಜು.13 NEWS DESK : ಕೊಂಡಂಗೇರಿ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಸಿ ವಿದ್ಯಾರ್ಥಿ ನಾಯಕರುಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಮಂತ್ರಿಯಾಗಿ ಹೆಚ್.ಯು.ಮೊಹಮ್ಮದ್ ಹರ್ಷಾದ್, ಕ್ರೀಡಾ ಮಂತ್ರಿಯಾಗಿ ಹೆಚ್.ಎಂ.ಅಬ್ದುಲ್ ರಹಿಮಾನ್ ಅಜಿನಾಸ್, ಶಿಸ್ತು ಪಾಲನಾ ಮಂತ್ರಿಯಾಗಿ ಅಬೂಬಕರ್ ಸಿದ್ದೀಕ್ ಆಯ್ಕೆಯಾದರು.
ಸ್ವಚ್ಛತಾ ಮಂತ್ರಿಯಾಗಿ ಕೆ.ಯು.ಫಾತಿಮತ್ ಫಾಹಿಜಾ, ತೋಟಗಾರಿಕಾ ಮಂತ್ರಿಯಾಗಿ ಪಿ.ಜೆ.ಫೈಜಲ್, ಹಣಕಾಸು ಮಂತ್ರಿಯಾಗಿ ಬಿ.ಎ.ಮೊಹಮ್ಮದ್ ಅಫ್ನಾನ್, ಆರೋಗ್ಯ ಮಂತ್ರಿಯಾಗಿ ಎಂ.ಎಸ್.ಶಮ್ನ, ವಾರ್ತಾ ಮಂತ್ರಿಯಾಗಿ ಆರ್.ಎ.ಆಯಿಷತು ಸಹಲ, ಸಾಂಸ್ಕೃತಿಕ ಮಂತ್ರಿಯಾಗಿ ಟಿ.ಐ.ಮೊಹಮ್ಮದ್ ಇಸಾಕ್, ನೀರಾವರಿ ಮಂತ್ರಿಯಾಗಿ ಎ.ಎಂ.ತೋಹ ಅವರನ್ನು ವಿದ್ಯಾರ್ಥಿಗಳು ಮತಚಲಾಯಿಸುವ ಮೂಲಕ ಆಯ್ಕೆ ಮಾಡಿದರು.
ವಿರೋಧ ಪಕ್ಷದ ನಾಯಕನಾಗಿ ಪಿ.ಹೆಚ್.ಮೊಹಮ್ಮದ್ ಮಿಸ್ಹಾಬ ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕರಾದ ಜೆ.ಸಿ.ಜಯಂತಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಮುಂದಿನ ದಿನಗಳಲ್ಲಿ ನಾಯಕರು ಮಾಡಬೇಕಾದ ಕರ್ತವ್ಯಗಳ ಬಗ್ಗೆ ವಿವರಿಸಿದರು. ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಬಿ.ಎಂ.ಲವಿನ್ ಮತದಾನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಶಾಲೆಯ ಇಐಅ ಕ್ಲಬ್ ನ ಸಂಚಾಲಕ ಎಂ.ಎನ್.ಸುಲೈಮಾನ್, ಗಣಿತ ಶಿಕ್ಷಕ ಎನ್.ಆರ್.ರಮೇಶ್, ವಿಜ್ಞಾನ ಶಿಕ್ಷಕ ಕೆ .ಎಫ್.ಆ್ಯನಿ, ದೈಹಿಕ ಶಿಕ್ಷಣ ಶಿಕ್ಷಕರಾದ ದಿವ್ಯಲತಾ, ಕನ್ನಡ ಭಾಷಾ ಶಿಕ್ಷಕ ಹೆಚ್.ವಿ.ತೇಜ ಹಾಜರಿದ್ದರು.