ಮಡಿಕೇರಿ ಜು.15 NEWS DESK : ಹಳ್ಳಿಗಟ್ಟು ಮಾರಮ್ಮ ದೇವರ ವಾರ್ಷಿಕ ಉತ್ಸವವು ಜು.16 ರಂದು ನಡೆಯಲಿದೆ ಎಂದು ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರತಿವರ್ಷದಂತೆ ಈ ಬಾರಿಯೂ ಕಕ್ಕಡ ಮಾಸಕ್ಕೆ ಒಂದು ದಿನ ಮುಂಚಿತವಾಗಿ ನಡೆಯಲಿದೆ.
ಜು.16 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ನಡೆಯಲಿದ್ದು, ಒಂದು ವಾರಗಳ ನಂತರ ಕಕ್ಕಡ ಮಾಸದಲ್ಲಿ ನಡೆಯುವ ಮತ್ತೊಂದು ಮಾರಿಗುಡಿ ಹಬ್ಬ ಜು.22 ರಂದು ನಡೆಯಲಿದೆ. ಹರಕೆ ಕಾಣಿಕೆ ಸಲ್ಲಿಸುವವರು ಈ ಎರಡು ದಿನಗಳಲ್ಲಿ ಯಾವ ದಿವಸ ಬೇಕಾದರೂ ಸಲ್ಲಿಸಬಹುದಾಗಿದೆ. ಊರಿನವರು ಮಾತ್ರವಲ್ಲದೆ ಯಾರು ಬೇಕಾದರೂ ಹಬ್ಬದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಜೋಡುಬೀಟಿಯಿಂದ ಮೂಕಳೇರ ಹಾಗೂ ಮಚ್ಚಿಯಂಡ ಬಲ್ಯಮನೆಗೆ ಹೋಗುವ ರಸ್ತೆಯಲ್ಲಿರುವ ಈ ದೇವಸ್ಥಾನಕ್ಕೆ ಪುರಾತನ ಕಾಲದ ಇತಿಹಾಸವಿದ್ದು ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿ ಪೂಜೆ ಪುನಸ್ಕಾರ ಹಾಗೂ ಹಬ್ಬ ನಡೆಯುತ್ತದೆ.
ಮಚ್ಚಿಯಂಡ ಕುಟುಂಬದ ಮುಂದಾಳತ್ವದಲ್ಲಿ ಇಲ್ಲಿ ಹಬ್ಬ ನಡೆಯಲಿದ್ದು, ಈ ಕುಟುಂಬದವರೇ ಇಲ್ಲಿ ಪೂಜಾರಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿಗೆ ಬ್ರಾಹ್ಮಣರ ಪೂಜೆ ನಿಷೇಧವಾಗಿದ್ದು ಕೊಡವ ಜನಾಂಗದವರೇ ಇಲ್ಲಿ ಪೂಜಾರಿಗಳಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಧ್ಯಕ್ಷರು-9880967573 ಅಥವಾ ಮೂಕಳೇರ ರಮೇಶ್, ಗೌರವ ಕಾರ್ಯದರ್ಶಿ-94838 15430 ಸಂಪರ್ಕಿಸಬಹುದಾಗಿದೆ.