ಮಡಿಕೇರಿ ಜು.15 NEWS DESK : ಎಲ್ಲ ರೀತಿಯ ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರ ಸಂಸ್ಥೆಗಳು ಟ್ರಸ್ಟ್ ಗಳು ಸಮಾಲೋಚನ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಪ್ರಯೋಗಾಲಗಳು ಮತ್ತು ಹೋಟೆಲ್ ಹಾಗೂ ಅಂಗಡಿ ಮುಗಟ್ಟು ಹಾಗೂ ಇನ್ನಿತರ ಕಡೆಗಳಲ್ಲಿನ ನಾಮ ಫಲಕಗಳಲ್ಲಿ ಶೇ.60 ರಷ್ಟು ಬಳಕೆ ಮಾಡುವಂತೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆಯ ಪ್ರಮುಖ ರವಿಗೌಡ, ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಕುರಿತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ -2022 ಮತ್ತು ತಿದ್ದುಪಡಿ 2024 ಸಮರ್ಪಕವಾಗಿ ಜಾರಿಗೊಳಿಸುವಂತೆ ಪ್ರಕಾರ ಆದೇಶ ಹೊರಡಿಸಿದೆ ಆದರೆ ಎಲ್ಲ ರೀತಿಯ ವಾಣಿಜ್ಯ.ಕೈಗಾರಿಕೆ. ಮತ್ತು ವ್ಯಾಪಾರ ಸಂಸ್ಥೆಗಳು ಟ್ರಸ್ಟ್ ಗಳು ಸಮಾಲೋಚನ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಪ್ರಯೋಗಾಲಗಳು ಮತ್ತು ಹೋಟೆಲ್ ಹಾಗೂ ಅಂಗಡಿ ಮುಗಟ್ಟು ಹಾಗೂ ಇನ್ನಿತರ ಕಡೆಗಳಲ್ಲಿನ ನಾಮ ಫಲಕಗಳಲ್ಲಿ ಶೇ60 ರಷ್ಟು ಜಾಗದಲ್ಲಿ ಕನ್ನಡ ಅಕ್ಷರಗಳನ್ನು ಒಳಗೊಂಡಿರಬೇಕು ಎಂದು ಸರಕಾರದ ಆದೇಶವಿದ್ದರೂ ಕೂಡ ಮಡಿಕೇರಿ ತಾಲೂಕಿನ ಹಲವು ಅಂಗಡಿಗಳು ಹಾಗೂ ಮಳಿಗೆಗಳಲ್ಲಿ ಇಂಗ್ಲಿಷ್ ನಾಮಫಲಕವೇ ರಾರಾಜಿಸುತ್ತಿರುವುದು ಖಂಡನೀಯ ಎಂದರು.
ಕೆಲವು ಉದ್ಯಮಿಗಳು ಈ ಆದೇಶವನ್ನು ಉಲ್ಲಂಘಿಸಿ ಹೊಸ ನಾಮಫಲಕ ಅಳವಡಿಸುವಲ್ಲಿ ಆಂಗ್ಲ ಭಾಷೆಗೆ ಮನ್ನಣೆ ನೀಡಿರುವುದು ಕಂಡು ಬರುತ್ತಿದೆ. ಕೆಲವು ಮಳಿಗೆಗಳಲ್ಲಿ ನಾಮಫಲಕವನ್ನು ತೆರವು ಮಾಡದೆ ಹಾಗೆ ಇರುವುದು ಕಂಡು ಬರುತ್ತಿದ್ದು. ಅಂತಹವರ ಮೇಲೆ ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದ ಅವರು, ಸರಕಾರದ ಆದೇಶದಂತೆ ಎಲ್ಲ ನಾಮ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಹಾಗೂ ಇತರ ಭಾಷೆ ಶೇ.40 ರಷ್ಟು ಇರಬೇಕೆಂದು ಆದೇಶ ಮಾಡಬೇಕು, ಮಡಿಕೇರಿ ತಾಲೂಕಿನದ್ಯಂತ ಇತರ ಭಾಷೆಗಳಲ್ಲಿರುವ ನಾಮಫಲಕಗಳನ್ನು ತೆರವು ಶೇ.60 ರಷ್ಟು ನಾಮಫಲ ಅಳವಡಿಸಲು ಆದೇಶ ಹೊರಡಿಸಬೇಕು ಆಗ್ರಹಿಸಿದರು. ತಪ್ಪಿದ್ದಲ್ಲಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಗವುದು ಎಂದು ಎಚ್ಚರಿಕೆ ನೀಡಿದರು.