ಸೋಮವಾರಪೇಟೆ ಜು.17 NEWS DESK : ಕರ್ನಾಟಕ ರಾಜ್ಯದ ಪ್ರತಿಷ್ಥಿತ ಸಂಸ್ಥೆಯಾದ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ನೀಡುವ 2024ನೇ ಸಾಲಿನ ಡಾ.ಪದ್ಮನಿ ಮಕ್ಕಳ ಹಕ್ಕುಗಳ ಫೆಲೋಶಿಪ್-2024 ಕ್ಕೆ ನಾವು ಪ್ರತಿಷ್ಠಾನ ಸಂಸ್ಥೆಯ ಪಿ.ಸುಮನ್ ಮ್ಯಾಥ್ಯೂ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಎಸ್.ಸಿ.ಎಂ ಹೌಸ್ ನಲ್ಲಿ ನಡೆದ ಡಾ.ಪದ್ಮಿನಿ ಅವರ ಜನ್ಮದಿನಾಚರಣೆಯಂದು ಫೆಲೋಶಿಪ್ ಪ್ರದಾನ ಮಾಡಲಾಯಿತು.
ಸಮೂದಾಯಗಳ ತಳಮಟ್ಟದ ಮಕ್ಕಳ ಹಕ್ಕುಗಳನ್ನು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ತರಬೇತಿ, ಉಸ್ತುವಾರಿ, ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆ ಮೂಲಕ ಎಲ್ಲ ಮಕ್ಕಳಿಗೂ ಎಲ್ಲ ಹಕ್ಕುಗಳುʼ ದೊರಕುವಂತೆ ಕಾರ್ಯನಿರ್ವಹಿಸಲು ಮತ್ತು ತಮ್ಮ ಸಮುದಾಯದೊಡನೆ ತೊಡಗಿಸಿಕೊಂಡು ಎಲ್ಲ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ದಿ ಹಾಗೂ ಭಾಗವಹಿಸುವ ಹಕ್ಕುಗಳನ್ನು ಎತ್ತಿಹಿಡಿಯುವುದು ಇದರ ಉದ್ದೇಶವಾಗಿದೆ ಎಂದು ಸುಮನಾ ತಿಳಿಸಿದ್ದಾರೆ.