ಮಡಿಕೇರಿ ಜು.17 NEWS DESK : ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ತುರ್ತುಗಾಗಿ, ಶಸ್ತ್ರಚಿಕಿತ್ಸೆಗೆ ಪಡಿತರ ಚೀಟಿ ಅವಶ್ಯಕತೆ ಇರುವುದಾಗಿ ಫಲಾನುಭವಗಳು ಕುಶಾಲನಗರ ತಾಲ್ಲೂಕಿನ ಶಾಸಕರ ಕಚೇರಿಗೆ ಮನವಿ ಸಲ್ಲಿಸಿದರು.
ರೋಗಿಗಳ ಮನವಿಗೆ ತಕ್ಷಣವೇ ಸ್ಪಂದಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣವೇ ಪಡಿತರ ಚೀಟಿಯನ್ನು ನೀಡುವಂತೆ ಸೂಚನೆ ನೀಡಿದ್ದರು.
ಕುಶಾಲನಗರ ತಾಲ್ಲೂಕು ಆಡಳಿತ ಕಚೇರಿಯಲ್ಲಿ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ತಾಲ್ಲೂಕು ಆಹಾರ ನಿರೀಕ್ಷಕರಾದ ಸ್ವಾತಿ ಅರ್ಹ 4 ಫಲಾನುಭವಿಗಳಿಗೆ ವೈದ್ಯಕೀಯ ಉದ್ದೇಶಕ್ಕಾಗಿ ಪಡಿತರ ಚೀಟಿ ವಿತರಿಸಿದರು.