ಸುಂಟಿಕೊಪ್ಪ ಜು.19 NEWS DESK : ಸುಂಟಿಕೊಪ್ಪ, ಮಾದಾಪುರ, ಸೋಮವಾರಪೇಟೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಕಳೆದ 3 ವರ್ಷಗಳ ಹಿಂದೆಯೇ ಅಪಾಯದ ಅಂಚಿನಲ್ಲಿದ್ದು, ಲೋಕೋಪಯೋಗಿ ಇಲಾಖೆ ಈ ರಸ್ತೆಗೂ ನಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿರುವ ಕೆಂಚೆಟ್ಟಿ ತೋಟದ ಸಮೀಪದಲ್ಲಿರುವ ಮೋರಿಯೊಂದು ಕಳೆದ ಮೂರು ವರ್ಷಗಳಿಂದಲ್ಲೂ ಅಪಾಯದ ಅಂಚಿನಲ್ಲಿದೆ. ತಡೆಗೋಡೆಗಳು ಕುಸಿಯಲಾರಂಭಿಸಿದೆ. ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಈ ರಸ್ತೆ ಬಹಳ ಕಿರಿದಾಗಿದ್ದು, ಮುಂಭಾಗದಿಂದ ಆಗಮಿಸುವ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಂಬಂಧಿಸಿದ ಇಲಾಖೆಯವರು ಸ್ಥಳ ಪರಿಶೀಲಿಸಿ, ತಡೆಗೋಡೆ ನಿರ್ಮಿಸಲು ಮುಂದಾಗುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.










