ಸುಂಟಿಕೊಪ್ಪ ಜು.19 NEWS DESK : ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಬಿ.ಎಸ್.ರಮೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಣಿಕಂಠ ಆಯ್ಕೆಯಾಗಿದ್ದಾರೆ.
ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ಸಂಘದ ಅಧ್ಯಕ್ಷ ಪಿ.ಆರ್.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವರ್ಕ್‍ಶಾಪ್ ಮಾಲೀಕರ ಸಂಘದ 22ನೇ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಉಪಾಧ್ಯಕ್ಷರಾಗಿ ತಂಗವೇಲು, ಖಜಾಂಚಿಯಾಗಿ ಸಂದೀಪ್, ಸಂಘಟನಾ ಕಾರ್ಯದರ್ಶಿಯಾಗಿ ಫೆಲಿಕ್ಸ್ ಡಿಸೋಜ, ಸಹ ಕಾರ್ಯದರ್ಶಿಯಾಗಿ ರಜಾಕ್, ಗೌರವ ಅಧ್ಯಕ್ಷರಾಗಿ ವಿ.ಎ.ಸಂತೋಷ್, ಪಿ.ಆರ್.ಸುಕುಮಾರ್, ಕೆ.ಪಿ.ವಿನೋದ್ ಹಾಗೂ 9 ಜನರನ್ನು ಸಮಿತಿ ಸದಸ್ಯರಾಗಿ ನೇಮಕ ಮಾಡಲಾಯಿತು.










