ನಾಪೋಕ್ಲು ಜು.22 NEWS DESK : ಬೇತು ಗ್ರಾಮದಿಂದ ಬಲಮುರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಕ್ಕಿಕಡವು ಎಂಬಲ್ಲಿ ಮೋರಿ ಕುಸಿದು ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ.
ಧಾರಾಕಾರ ಮಳೆಯಿಂದಾಗಿ ಗದ್ದೆಗಳ ಮಧ್ಯ ಭಾಗಕ್ಕಾಗಿ ಸಾಗುವ ರಸ್ತೆಗೆ ಅಳವಡಿಸಿದ್ದ ಮೋರಿಯ ಮಧ್ಯಭಾಗ ಕುಸಿದು ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಬಲಮುರಿ, ಪಾರಾಣೆ ಗ್ರಾಮದಂದ ನಾಪೋಕ್ಲು ಪಟ್ಟಣಕ್ಕೆ ಸಮೀಪದ ರಸ್ತೆ ಇದಾಗಿದ್ದು, ಈ ಮಾರ್ಗವಾಗಿ ಹಲವಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ. ಆದ್ದರಿಂದ ಸಂಬಂಧಪಟ್ಟವರು ಈ ರಸ್ತೆಯಲ್ಲಿ ಕುಸಿದಿರುವ ಭಾಗವನ್ನು ಶೀಘ್ರದಲ್ಲಿ ದುರಸ್ತಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.