ಮಡಿಕೇರಿ ಜು.23 NEWS DESK : ಗಿರಿಜನ ಲ್ಯಾಂಪ್ ಸಹಕಾರ ಸಂಘಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಕೊಡಗು ಜಿಲ್ಲಾ ಲ್ಯಾಂಪ್ ಸಹಕಾರ ಸಂಘ ಸೋಮವಾರಪೇಟೆ, ಬಸವನಹಳ್ಳಿ ಮತ್ತು ತಿತಿಮತಿ ಲ್ಯಾಂಪ್ ಸಹಕಾರ ಸಂಘ ಮನವಿ ಮಾಡಿದೆ.
ಸಂಘದ ಅಧ್ಯಕ್ಷರುಗಳಾದ ಎಸ್.ಆರ್.ಅರುಣ್ ರಾವ್ ಮತ್ತು ಪಿ.ಕೆ.ಮಣಿ ಹಾಗೂ ಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ಸದಸ್ಯ ಎಸ್.ಎನ್.ಅನಂತ, ಕೆ.ಎಸ್.ಶಿವಕುಮಾರ್, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.