ಮಡಿಕೇರಿ ಜು.25 NEWS DESK : ಸಿದ್ದಾಪುರ ಸಮೀಪದ ಪಳ್ಳೆಕೆರೆ ಎಂಬಲ್ಲಿ ಹುಲಿಯ ಹೆಜ್ಜೆ ಗುರುತುಗಳು ಗೋಚರಿಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಪಳ್ಳೆಕೆರೆ ಗ್ರಾಮದ ಕಾಫಿ ತೋಟವೊಂದರಲ್ಲಿ ಇಂದು ಬೆಳಗ್ಗಿನ ಜಾವ ಕಾರ್ಮಿಕರು ಕೆಲಸಕ್ಕೆ ತೆರಳುವ ಸಂದರ್ಭ ಹುಲಿಯ ಹೆಜ್ಜೆ ಗುರುತು ಹಸಿ ಮಣ್ಣಿನಲ್ಲಿ ಮೂಡಿರುವುದು ಗೋಚರಿಸಿದೆ. ಸ್ಥಳೀಯರು ಇದರ ಫೋಟೋ ತೆಗೆದು ಅರಣ್ಯ ಇಲಾಖೆ ಸಿಬ್ಬಂದಿಗೆ ಕಳುಹಿಸಿದ್ದು, ಅಧಿಕಾರಿಗಳು ಹುಲಿ ಹೆಜ್ಜೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ವನ್ಯಜೀವಿಗಳ ಉಪಟಳ ಮಿತಿಮೀರಿದ್ದು, ಎರಡು ದಿನಗಳ ಹಿಂದೆ ಕಾಡಾನೆ ಗುಂಪು ಗುಹ್ಯ ಶಾಲಾ ವಠಾರಕ್ಕೆ ಲಗ್ಗೆ ಇಟ್ಟು ಬಾಳೆ, ತೆಂಗು ಗಿಡ ನಾಶ ಪಡಿಸಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂಬAಧ ಕಾರ್ಯಾಚರಣೆ ನಡೆಸಿ ತೋಟಗಳಲ್ಲಿ ಬೀಡುಬಿಟ್ಟಿರುವ ವನ್ಯ ಪ್ರಾಣಿಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ್ದಾರೆ.