ಮಡಿಕೇರಿ ಜು.25 NEWS DESK : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಜು.26 ರಂದು ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ದೀಪನಮನ ಎಂಬ ವಿನೂತನ ಕಾಯ೯ಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ತಿಳಿಸಿದ್ದಾರೆ,
ಮಡಿಕೇರಿಯ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ವೖತ್ತದ ಬಳಿಯಿರುವ ಗಾಂಧಿ ಭವನದಲ್ಲಿ ಸಂಜೆ 6.30 ಗಂಟೆಗೆ ಆಯೋಜಿತ ಕಾಯ೯ಕ್ರಮದಲ್ಲಿ ದೇಶದ ಸೇನಾನಿಗಳನ್ನು ಸ್ಮರಿಸುವ ದೇಶಭಕ್ತಿಗೀತೆ ಕಾಯ೯ಕ್ರಮ ಇರುತ್ತದೆ. ಸುಂಟಿಕೊಪ್ಪದ ವಿದ್ಯಾಥಿ೯ನಿ ಶ್ರೀಜಾ ಅವರಿಂದ ದೇಶದ ಸೇನಾನಿಗಳ ಮಹತ್ವದ ಬಗ್ಗೆ ಮಾತು, ನಂತರ ಕಾಗಿ೯ಲ್ ಹುತಾತ್ಮರಿಗೆ ಗೌರವಸೂಚಕವಾಗಿ ದೀಪಗಳನ್ನು ಬೆಳಗಿಸಿ ನಮನ ಸಲ್ಲಿಸಲಾಗುತ್ತದೆ. ಇದೇ ಸಂದಭ೯ ಕಾರುಗುಂದದ ಮಾಜಿ ಯೋಧ ಬಿ.ಎ.ಲೋಕೇಶ್ ಅವರನ್ನು ಸನ್ಮಾನಿಸಲಾಗುತ್ತದೆ. ಸಾವ೯ಜನಿಕರೂ ಕಾಯ೯ಕ್ರಮದಲ್ಲಿ ಪಾಲ್ಗೊಂಡು ವೀರಯೋಧರಿಗೆ ತಮ್ಮ ಗೌರವ ಸೂಚಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.