ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾಗಿ೯ಲ್ ವಿಜಯ ದಿನದ ಸಮಾರಂಭದಲ್ಲಿ ಮಾಜಿ ಸೇನಾಧಿಕಾರಿಗಳಾದ ಹಾನರರಿ ಕ್ಯಾಪ್ನನ್ ಜಿ.ಎಸ್.ರಾಜಾರಾಮ್, ಎನ್.ಚಂದ್ರನ್, ಸಿ.ಪ್ರಮೋದ್ ಕುಮಾರ್, ಬಾಬು ಪ್ರಸಾದ್ ರೈ ಅವರನ್ನು ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾಯ೯ದಶಿ೯ ಕಿರಣ್ ಕುಂದರ್, ವಲಯ ಸೇನಾನಿ ಅನಿತಾ ಪೂವಯ್ಯ, ಅರಣ್ಯಾಧಿಕಾರಿ ಮಯೂರ್, ರೋಟರಿ ಪ್ರಮುಖರಾದ ಬಿ,ಜಿ, ಅನಂತಶಯನ, ಅನಿಲ್ ಹೆಚ್,ಟಿ, ಎಸ್ ಎಸ್ ಸಂಪತ್ ಕುಮಾರ್, ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್.ರಾಜಾರಾಮ್, ಕಾಗಿ೯ಲ್ ಪ್ರದೇಶದಲ್ಲಿ ದೇಶರಕ್ಷಣೆಗಾಗಿ ಕತ೯ವ್ಯ ಸಲ್ಲಿಸುವುದು ಜೀವನದ ಮಹೋನ್ನತ ಅನುಭವವಾಗಿದೆ, ಕಾಗಿ೯ಲ್ ಸಮರದ ಬಳಿಯ ದೇಶದ ರಕ್ಷಣಾ ಇಲಾಖೆಯು ಕಾಗಿ೯ಲ್ ಗೆ ಅಗತ್ಯವಾಗಿದ್ದ ಅತ್ಯಾಧುನಿಕ ರಕ್ಷಣಾ ಉಪಕರಣ 445 ಕಿ.ಮೀ. ವಿದ್ಯುತ್ ಬೇಲಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿತ್ತು ಎಂದರಲ್ಲದೇ, ಪ್ರವಾಸಿಗರು ಜೀವನದಲ್ಲಿ ಒಮ್ಮೆಯಾದರೂ ಕಾಗಿ೯ಲ್ ಯುದ್ದ ಪ್ರದೇಶಕ್ಕೆ ತೆರಳಿ ಅಲ್ಲಿನ ಪ್ರಾಕೖತ್ತಿಕ ಸೌಂದಯ೯ದ ಜತೆಗೇ ಸೈನಿಕರ ಕಠಿಣ ಜೀವನ ಶೈಲಿ, ಪರಿಶ್ರಮ, ತ್ಯಾಗವನ್ನು ಕಾಣುವುದು ಸೂಕ್ತ , ನಾವು ಜೀವಿಸುವ ದೇಶದ ಗಡಿಯಲ್ಲಿ ಏನೇನಾುತ್ತಿದೆ ಎಂಬುದನ್ನು ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಸನ್ಮಾನಿತರಾದ ಎನ್.ಚಂದ್ರನ್ ಮಾತನಾಡಿ, ಕಾಗಿ೯ಲ್ ವಿಜಯ ದಿವಸ್ ದಿನ ಮಾತ್ರ ಸೈನಿಕರನ್ನು ಸ್ಮರಿಸಿಕೊಳ್ಳುವಂತಾಗಬಾರದು, ಹಗಲಿರುಳು ಪರಿಶ್ರಮದಿಂದ ಗಡಿಗಳಲ್ಲಿ, ದೇಶದ ಬೇರೆ ಬೇರೆ ಕಡೆ ದೇಶಸೇವೆಯ ಕತ೯ವ್ಯ ಸಲ್ಲಿಸುತ್ತಿರುವ ಸೈನಿಕರನ್ನು ಸ್ಮರಿಸಿಕೊಂಡು ಯೋಧರನ್ನು ಗೌರವಿಸುವ ಕಾಯ೯ ಸಮಾಜಬಾಂಧವರಿಂದ ಆಗಬೇಕು ಎಂದು ಮನವಿ ಮಾಡಿದರು.
ಸನ್ಮಾನಿತರಾದ ಸಿ, ಪ್ರಮೋದ್ ಕುಮಾರ್ ಮಾತನಾಡಿ, ಕಾಗಿ೯ಲ್ ಸಮರದ ಸಂದಭ೯ ಮೊದಲ ಹಂತವಾಗಿ ಕಾಗಿ೯ಲ್ ಶಿಖರವೇರಿದ 17 ಸೈನಿಕರ ಪೈಕಿ ಕೇವಲ 7 ಸೈನಿಕರು ಮಾತ್ರ ಶಿಖರದ ತುತ್ತ ತುದಿ ತಲುಪಲು ಸಾಧ್ಯವಾಯಿತು, ಯೋಗೀಂದ್ರ ಸಿಂಗ್ ಯಾದವ್ ಎಂಬುವವರು ಗುಂಡಿನ 9 ಬುಲೆಟ್ ದೇಹದೊಳಕ್ಕೆ ನುಗ್ಗಿದರೂ ವೀರತಯಿಂದ ಕಾದಾಡಿ ಶತ್ರುಸೈನಿಕರ ಸದೆಬಡಿಯುವ ಕಾಯಾ೯ಚರಣೆಯ ಮುಂಚೂಣಿತನ ವಹಿಸಿ ಜೀವಂತವಾಗಿ ಇಂದಿಗೂ ಇದ್ದಾರೆ ಎಂದು ಸ್ಮರಿಸಿದರು, ಸಮಾಜವು ಯೋದರಿಗೆ ನೀಡುತ್ತಿರುವ ಸನ್ಮಾನವು ದೇಶದ ಎಲ್ಲಾ ಯೋಧರಿಗೆ ಸಲ್ಲುತ್ತದೆ ಎಂದೂ ಅವರು ಹೇಳಿದರು.
ಸನ್ಮಾನಿತ ಮಾಜಿ ಸೇನಾನಿ ಬಾಬು ಪ್ರಸಾದ್ ರೈ ಮಾತನಾಡಿ, ಸೈನ್ಯ ಸೇರುವುದು ತನ್ನ ತಂದೆಯ ಅಭಿನಾಶೆಯಾಗಿತ್ತು, ಹೇಗಿದ್ದರೂ ಒಂದಲ್ಲ ಒಂದು ದಿನ ಸಾಯಲೇಬೇಕಾದ ದೇಹವಿದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರೆ ಹುತಾತ್ಮನಾಗುತ್ತೀಯ ಎಂದು ತಂದೆ ಪ್ರೇರಣೆ ನೀಡಿ ಸೈನ್ಯಕ್ಕೆ ಸೇರಿಸಿದ್ದರು ಎಂದರಲ್ಲದೇ,ಸೈನ್ಯದಲ್ಲಿ ಸಂಕಷ್ಟ ಎದುರಾಗುವುದೇ ಶತ್ರುಗಳು ಆಕ್ರಮಣ ಮಾಡುವ ರಾತ್ರಿವೇಳೆಯಾಗಿದ್ದು ಈ ಸಂದಭ೯ ಪ್ರತೀಯೋವ೯ ಯೋಧನೂ ಜಾಗ್ರತನಾಗಿ ದೇಶಕಾಯುತ್ತಿರುತ್ತಾನೆ ಎಂದೂ ಅವರು ಹೇಳಿದರು, ಸೈನಿಕನಾಗಿ ದೇಶಕ್ಕಾಗಿ ಕತ೯ವ್ಯ ಸಲ್ಲಿಸುವುದು ಜೀವನದಲ್ಲಿ ದೊರಕುವ ಪುಣ್ಯದ ಅವಕಾಶ ಎಂದೂ ಅವರು ಹೆಮ್ಮೆಯಿಂದ ನುಡಿದರು,
ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ನಮ್ಮ ದೇಶದ ತಿರಂಗ ಕೇವಲ ಗಾಳಿಯಿಂದ ಹಾರಾಡುತ್ತಿಲ್ಲ, ಅದರ ಹಾರಾಟದ ಹಿನ್ನಲೆಯಲ್ಲಿ ದೇಶಕ್ಕಾಗಿ ವೀರಮರಣವನ್ನಪ್ಪಿದ ಸೈನಿಕರ ಉಸಿರಿನಿಂದ ಎಂದು ಸೈನಿಕರ ಪರಾಕ್ರಮವನ್ನು ಸ್ಮರಿಸಿದರು,
ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು ಮಾತನಾಡಿ, ದೇಶಕ್ಕಾಗಿ ತಮ್ಮೆಲ್ಲಾ ಸುಖಸಂತೋಷ ಬದಿಗಿಟ್ಟು ಕತ೯ವ್ಯ ಸಲ್ಲಿಸುತ್ತಿರುವ ವೀರರನ್ನು ಸ್ಮರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ರೋಟರಿ ವುಡ್ಸ್ ವತಿಯಿಂದ ಕಾಗಿ೯ಲ್ ವಿಜಯ ದಿನವನ್ನು ಸೈನಿಕರಿಗೆ ಸನ್ಮಾನ ಮಾಡುವ ಮೂಲಕ ಅಥ೯ಪೂಣ೯ವಾಗಿ ಆಚರಿಸಲಾಗಿದೆ ಎಂದರು.
ರೋಟರಿ ವುಡ್ಸ್ ಕಾಯ೯ದಶಿ೯ ಕಿರಣ್ ಕುಂದರ್ ವಂದಿಸಿದ ಕಾಯ೯ಕ್ರಮವನ್ನು ಕಿಗ್ಗಾಲು ರಂಜಿತ್, ರವಿಕುಮಾರ್, ಚಂದ್ರಶೇಖರ್, ಪ್ರವೀಣ್ ಕುಮಾರ್ ನಿವ೯ಹಿಸಿದರು. ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿನ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ರೋಟರಿ ವುಡ್ಸ್ ವತಿಯಿಂದ ಪುಪ್ಪಾಚ೯ನೆ ಮಾಡಲಾಯಿತು.