ಮಡಿಕೇರಿ ಜು.26 NEWS DESK : ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕ ಗಾಳಿ, ಮಳೆಯಾಗುತ್ತಿದ್ದು ಮನೆಗಳಿಗೆ ಹಾನಿಯಾಗಿದೆ. ನೀರುಗುಂದ ಗ್ರಾಮದ ನಿವಾಸಿ ಎನ್.ಯು.ತ್ಯಾಗರಾಜ ಎಂಬುವವರ ಮನೆ ನೆಲಸಮಗೊಂಡಿದೆ.
ಕಳೆದ ವರ್ಷ ಇದೇ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಗೊಳಗಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಗಲಿಲ್ಲ ಎಂದು ತ್ಯಾಗರಾಜ ಪತ್ರಿಕೆಗೆ ಮಾಹಿತಿ ನೀಡಿದರು. ಈ ವರ್ಷ ಅಧಿಕ ಮಳೆಯಾಗುತ್ತಿರುವುದರಿಂದ ಅಂಗ ವೈಫಲ್ಯ ಹೊಂದಿರುವ ನಾನು ಬೆಂಗಳೂರಿನಲ್ಲಿರುವ ನÀನ್ನ ಮಗನ ಮನೆಯಲ್ಲಿ ತಂಗಿದ್ದೆ. ಹಾಗಾಗಿ ಅನಾಹುತ ತಪ್ಪಿದೆ, ನನ್ನ ಮನೆ ಸಂಪೂರ್ಣ ನೆಲಸಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.