ಮಡಿಕೇರಿ ಜು.30 NEWS DESK : ಕಳೆದ 10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ವಿಪರೀತ ಗಾಳಿಯಿಂದ ಕಂಬದ ಬದಲಾವಣೆ ಪದೇ ಪದೇ ವಿದ್ಯುತ್ ಜಾಲಕ್ಕೆ ಹಾನಿ ಉಂಟಾಗುತ್ತಿರುವುದರಿ0ದ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮಡಿಕೇರಿ ವಿಭಾಗದ ಕಾರ್ಯನಿರ್ವಹಕ ಇಂಜಿನಿಯರ್ ಕೋರಿದ್ದಾರೆ.
ತೀವ್ರವಾದ ಮಳೆಗಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಈವರೆಗೆ ಒಟ್ಟು 2454 ಕಂಬಗಳು ಹಾಗೂ 46 ಸಂಖ್ಯೆಯ ವಿದ್ಯುತ್ ಪರಿವರ್ತಕಗಳು ಮತ್ತು 1.72 ಕಿ.ಲೋಮೀಟರ್ ವಾಹಕಗಳು ಹಾನಿಗೊಳಗಾಗಿರುತ್ತದೆ. ಈಗಾಗಲೇ 2150 ಕಂಬಗಳನ್ನು ಹಾಗೂ ಎಲ್ಲಾ ಪರಿವರ್ತಕಗಳನ್ನು ದುರಸ್ಥಿಗೊಳಿಸಿ ಬದಲಾಯಿಸಲಾಗಿದೆ. ದೈನಂದಿನ ಚಟುವಟಿಕೆಯಲ್ಲಿ ಸರಾಸರಿ 100 ಕಂಬಗಳ ಬದಲಾವಣೆಯ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಮಳೆಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ಪ್ರತಿದಿನ ಸರಾಸರಿ 80-100 ಕಂಬಗಳ ಮುರಿವಿಕೆ ವರಿಯಾಗುತ್ತಿದೆ.
ವಿದ್ಯುತ್ ಜಾಲದ ದುರಸ್ಥಿ ಕಾರ್ಯವನ್ನು ಚುರುಕುಗೊಳಿಸಲು, ವಿದ್ಯುತ್ ಜಾಲವನ್ನು ಪುನಃ ಸ್ಥಾಪಿಸಲು ಮಡಿಕೇರಿ ವಿಭಾಗದ 231 ಸಂಖ್ಯೆಯ ಸಿಬ್ಬಂದಿ, ಇತರೆ ವಿಭಾಗಗಳಿಂದ ಹಾಗೂ ಹೊರಗುತ್ತಿಗೆಯಿಂದ 136 ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರರ 135 ಸಿಬ್ಬಂದಿ ಒಟ್ಟು 502 ಸಿಬ್ಬಂದಿಗಳನ್ನು ತೈನೆತಿಸಲಾಗಿದ್ದು, ಎಲ್ಲರೂ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಾದ್ಯಂತ ಮಳೆಗಾಳಿಯಿಂದ ಶಾಖಾಧಿಕಾರಿಗಳು ವಿದ್ಯುತ್ ಚಾಲದ ಮರುಸ್ಥಾಪನೆಯಲ್ಲಿ ನಿರತರಾಗಿರುತ್ತಾರೆ. ಶಾಖಾಧಿಕಾರಿಗಳು ಬ್ರೇಕ್ಡೌನ್ ನಿರ್ವಹಣೆ ಕಾಮಗಾರಿಗಳಲ್ಲಿ ನಿರತರಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿರುವುದಿಲ್ಲ, ಆದ್ದರಿಂದ ಗ್ರಾಹಕರ ದೂರಗಳನ್ನು ದಾಖಲಿಸಿ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾಗಿ ಟಾಲ್ ಫ್ರೀ ನಂಬರ್ 9141038902 ನೀಡಲಾಗಿದ್ದು, ವಿದ್ಯುತ್ ಜಾಲದ ಯಾವುದೇ ಸಮಸ್ಯೆ ಇದ್ದಲ್ಲಿ ಗ್ರಾಹಕರು ಈ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.