ಸುಂಟಿಕೊಪ್ಪ,ಆ.3 NEWS DESK : ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿನ ತೋಟದಲ್ಲಿ ಕಡು ಬಡತನದಲ್ಲಿರುವ ವೃದ್ಧ ದಂಪತಿಗಳಿಗೆ ಬಿಜೆಪಿ ಕಾರ್ಯಕರ್ತರು ನೆರವು ನೀಡಿದರು.
ಗ್ರಾಮದ ಮಾಹಿಲ ಮತ್ತು ಗಿರಿಜ ದಂಪತಿಗಳ ಮನೆಗೆ ಭೇಟಿದ ನೀಡಿದ ಜಿಲ್ಲಾ ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಬಿ.ಬಿ.ಭಾರತೀಶ್, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಸೋಮವಾರಪೇಟೆ ಮಂಡಲ ಓಬಿಸಿ ಅಧ್ಯಕ್ಷ ಪಿಆರ್ ಸುನಿಲ್ ಕುಮಾರ್ ದಂಪತಿಗಳಿಗೆ ಆಹಾರ ಕಿಟ್ ವಿತರಿಸಿದರಲ್ಲದೆ, ಮಳೆಯಿಂದ ಶಿಥಿಲಾವಸ್ಥೆಯಿಂದ ಸೋರುತ್ತಿದ್ದನ್ನು ಮನಗಂಡು ಮನೆಯ ಮೇಲ್ಛಾವಣಿಗೆ ಪ್ಲಾಸ್ಟಿಕ್ ಹೊದಿಕೆಯನ್ನು ನೀಡಿದರು. ಮನೆಯ ನಿರ್ಮಾಣಕ್ಕೆ ಪಂಚಾಯಿತಿ ವತಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಹಕರಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪದ್ಮನಾಭ, ಗ್ರಾ.ಪಂ ಮಾಜಿ ಅಧ್ಯಕ್ಷ ಪದ್ಮನಾಭ, ಲಿಖಿತ್ ದಾಮೋದರ ಹೊಸತೋಟ, ಭೂತ್ ಅಧ್ಯಕ್ಷ ಚಿದಾನಂದ ಉಲ್ಲಾಸ್, ಸುಂಟಿಕೊಪ್ಪ ಶಕ್ತಿ ಕೇಂದ್ರ ಅಧ್ಯಕ್ಷ ಧನು ಕಾವೇರಪ್ಪ, ಕೆದಕಲ್ ಕನೀಸ್ ಸೇರಿದಂತೆ ಮತ್ತಿತರರು ಇದ್ದರು.