ಕುಶಾಲನಗರ ಆ.6 NEWS DESK : ಕುಶಾಲನಗರ ಗಣಪತಿ ದೇವಾಲಯದ ಮೂಲ ವಿಗ್ರಹಕ್ಕೆ ದಾನಿಗಳು 12ನೇ ಅವತಾರದ ಬೆಳ್ಳಿಯ ಕವಚವನ್ನು ಅರ್ಪಿಸಿದರು. ಮೂಲತಃ ಬೆಂಗಳೂರಿನ ನಿವಾಸಿಗಳು ಪ್ರಸಕ್ತ ಅಮೆರಿಕದಲ್ಲಿ ಉದ್ಯೋಗದಲ್ಲಿರುವ ವಿದ್ಯಾ ಮಂಜುನಾಥ ದಂಪತಿಗಳು ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ದೇವಾಲಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು. ಶ್ರೀ ಗಣಪತಿಯ 32 ಅವತಾರದಲ್ಲಿ ಈಗಾಗಲೇ 12ನೇ ಅವತಾರದ ಬೆಳ್ಳಿಯ ಕವಚ ದೇವರಿಗೆ ಸಮರ್ಪಣೆಯಾಗಿದೆ. ಇನ್ನೂ 20 ಅವತಾರಗಳ ಕವಚಗಳು ಮುಂದಿನ ದಿನಗಳಲ್ಲಿ ದಾನಿಗಳಿಂದ ದೊರೆಯುವ ಆಶಯವನ್ನು ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ವ್ಯಕ್ತಪಡಿಸಿದರು. ಈ ಸಂಬಂಧ ದೇವಾಲಯದಲ್ಲಿ ವಿಶೇಷ ಹೋಮ ಹವನಾದಿ ಕಾರ್ಯಕ್ರಮಗಳು ಜರಗಿದವು. ದೇವಾಲಯದ ಆಡಳಿತ ಮಂಡಳಿ ಗೌರವಾಧ್ಯಕ್ಷ ವಿ.ಎನ್.ವಸಂತ್ ಕುಮಾರ್, ಅರ್ಚಕರಾದ ರಾಘವೇಂದ್ರ ಭಟ್ ಮತ್ತು ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಇದ್ದರು.