ಸೋಮವಾರಪೇಟೆ NEWS DESK ಆ.9 : ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಪೈಸಾರಿ ಗ್ರಾಮದಲ್ಲಿ ನಡೆದ ಕಾಡಾನೆ ಧಾಳಿಯಿಂದ ಗಾಯಗೊಂಡಿದ್ದ ವಾಟರ್‌ಮೆನ್ ಹುಸೇನ್ ಅವರಿಗೆ ಸೋಮವಾರಪೇಟೆ-ಕುಶಾಲನಗರ ತಾಲೂಕು ನೀರು ನಿರ್ವಾಹಕರ ಸಂಘದ ವತಿಯಿಂದ ಆರ್ಥಿಕ ನೆರವು ಒದಗಿಸಲಾಯಿತು. ಗಾಯಾಳುವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಂಘದ ಪದಾಧಿಕಾರಿಗಳು, ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಎಚ್.ಎನ್. ಶಂಕರ್, ಉಪಾಧ್ಯಕ್ಷ ಆಸಿಫ್, ಪ್ರಧಾನ ಕಾರ್ಯದರ್ಶಿ ಎಚ್.ಟಿ. ಶಶಿಕುಮಾರ್, ಪದಾಧಿಕಾರಿಗಳಾದ ಬಿ.ಆರ್. ವಸಂತ್, ಕೆ.ಪಿ. ಶಶಿಕುಮಾರ್ ಅವರುಗಳು ಉಪಸ್ಥಿತರಿದ್ದು, ನೆರವು ಹಸ್ತಾಂತರಿಸಿದರು.