ಸೋಮವಾರಪೇಟೆ NEWS DESK ಆ.9 : ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಆಚರಿಸಲಾಯಿತು. ಇಲ್ಲಿನ ಶ್ರೀ ಮುತ್ತಪ್ಪ ಅಯ್ಯಪ್ಪ ದೇವಾಲಯದಲ್ಲಿ ಬೆಳಗ್ಗಿನಿಂದಲೇ ನಾಗರಬನದಲ್ಲಿ ವಿಶೇಷ ಪೂಜೆ ಅರ್ಚಕ ಮಣಿಕಂಠ ನಂಬೂದರಿ ನೇತೃತ್ವದಲ್ಲಿ ನಡೆಯಿತು. ನಾಗರ ಬನದಲ್ಲಿ ಹಾಲಭಿಷೇಕ, ಅರಶಿಣ, ಎಳನೀರು ಹಾಗೂ ಕುಂಕುಮ ಅಭಿಷೇಕ ಮತ್ತು ಮಹಾ ಮಂಗಳಾರತಿ ಮತ್ತು ದೀಪರಾಧನೆ ನಡೆಯಿತು ದೇವಾಲಯದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಹಲವು ಭಕ್ತರು ಪಾಲ್ಗೊಂಡಿದ್ದರು. ತಾಲ್ಲೂಕಿನ ಅರಿಶಿಣಗುಪ್ಪೆಯ ಶ್ರೀ ಮಂಜುನಾಥದೇವಾಲಯದ ನಾಗರಬನದಲ್ಲಿ, ಸೋಮೇಶ್ವರ ದೇವಾಲಯದ ನಾಗರಕಲ್ಲಿಗೂ ಜನರು ಹಾಲಿನ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.