
ಮಡಿಕೇರಿ ಆ.14
NEWS DESK : “ಜಾತ್ಯಾತೀತತೆ ಭಾರತದ ಧರ್ಮ” ಎಂಬ ಶೀರ್ಷಿಕೆಯೊಂದಿಗೆ ಆ.15 ರಂದು ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್.ವೈ.ಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಸಂಜೆ 4 ಗಂಟೆಗೆ ಸುಂಟಿಕೊಪ್ಪದ ಎಸ್.ಎಸ್ ಆಡಿಟೋರಿಯಂನಲ್ಲಿ ನಡೆಯುವ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮನ್ನು ಯಶಸ್ವಿಗೊಳಿಸುವಂತೆ ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯು ಕರೆ ನೀಡಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಅನೀಸ್ ಕೌಸರಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭಾಗವಹಿಸಲಿದ್ದಾರೆ. ಸರ್ವ ಧರ್ಮ ಸಮಾವೇಶದಲ್ಲಿ ಕೊಡಗು ಜಿಲ್ಲಾ ಉಪ ಖಾಝಿಗಳಾದ ಶೈಖುನಾ ಎಂ.ಎಂ ಅಬ್ದುಲ್ಲಾ ಫೈಝಿ, ಕಿರಿಕೊಡ್ಲಿ ಮಠದ ಶ್ರೀ ಶ್ರೀ ಸದಾಶಿವ ಸ್ವಾಮೀಜಿ, ಫಾದರ್ ಮದುಕಿರಣ್.ಡಿ ಮತ್ತು ಇಬ್ರಾಹಿಂ ಮಾಸ್ಟರ್ ಸುಂಟಿಕೊಪ್ಪ ಭಾಗವಹಿಸಲಿದ್ದಾರೆ. ಇದಲ್ಲದೇ ಹಲವು ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ನಾಯಕರುಗಳು ಭಾಗವಹಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.

