
ಸೋಮವಾರಪೇಟೆ ಆ.14
NEWS DESK : ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರ್‍ಘರ್ ತಿರಂಗ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಬೈಕ್ ಜಾಥ ನಡೆಯಿತು. ಕಕ್ಕೆಹೊಳೆಯಿಂದ ಹೊರಟ ಬೈಕ್ ಜಾಥ, ಆನೆಕೆರೆ ಮಾರ್ಗವಾಗಿ ಜೇಸಿ ವೇದಿಕೆಯ ಮೂಲಕ ಕಕ್ಕೆಹೊಳೆ ಜಂಕ್ಷನ್‍ನಲ್ಲಿ ಮುಕ್ತಾಯವಾಯಿತು. ಜಾಥದಲ್ಲಿ 80 ಕ್ಕೂ ಅಧಿಕ ಬೈಕ್‍ಗಳು ಭಾಗವಹಿಸಿದ್ದವು. ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಪಕ್ಷದಿಂದ ಯುವಕರಲ್ಲಿ ದೇಶಭಕ್ತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆ.14 ಮತ್ತು 15ರಂದು ಎಲ್ಲರ ಮನೆ ಮೇಲೆ ತಿರಂಗವನ್ನು ಹಾರಿಸುವ ಮೂಲಕ ದೇಶಭಕ್ತಿಯನ್ನು ಮೂಡಿಸಬೇಕಾಗಿದೆ. ಅಲ್ಲದೆ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆದು ಬಾಂಗ್ಲಾದೇಶವನ್ನು ವಶಪಡಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಪಕ್ಷದ ಮುಖಂಡರಾದ ಎಸ್.ಜಿ.ಮೇದಪ್ಪ, ಗೌತಮ್, ಬಿ.ಬಿ.ಭಾರತೀಶ್, ಮನುಕುಮಾರ್ ರೈ, ಮಹೇಶ್ ತಿಮ್ಮಯ್ಯ, ಪಿ.ಕೆ.ಚಂದ್ರು, ಮಹೇಶ್ ಇದ್ದರು.

