ಮಡಿಕೇರಿ ಆ.14 NEWS DESK : ಗೊಣಿಕೊಪ್ಪ ಕಾಫಿ ಮಂಡಳಿ ಹಾಗೂ ಬಾಳೆಲೆ ಗ್ರಾ.ಪಂ ಸಹಯೋಗದಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ ನಡೆಯಿತು. ಬಾಳೆಲೆ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳೆಯಿoದಾಗಿ ಕಾಫಿ ಗಿಡಗಳಲ್ಲಿ ಕೊಳೆರೋಗ ಮತ್ತು ಕಾಫಿ ಉದುರುವುದರ ಬಗ್ಗೆ, ಮರು ನಾಟಿ, ಗೋಡೌನ್, ಕಾಫಿ ಕಣ, ಹೊಸ ಕೆರೆ, ಬಾವಿ, ಸ್ಪ್ರಿಂಕ್ಲೇರ್ ಉಪಕರಣ, ಮೋಟಾರ್ ಮಿನಿ ಟ್ರಾಕ್ಟರ್ ಮುಂತಾದವುಗಳಿಗೆ ಇರುವ ಸಬ್ಸಿಡಿಗಳ ಬಗ್ಗೆ ಗೊಣಿಕೊಪ್ಪಲು ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಡಿ.ಎಸ್.ಮುಖಾರಿಬ್ ಮಾಹಿತಿ ನೀಡಿದರು. ಬಾಳೆಲೆ ಹೋಬಳಿ ವ್ಯಪ್ತಿಯ 50ಕ್ಕೂ ಹೆಚ್ಚು ಕಾಫಿ ಬೆಳೆಗಾರರು ಭಾಗವಹಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.