ಮಡಿಕೇರಿ NEWS DESK ಆ.23 : ಜಿಲ್ಲಾ ಕೇಂದ್ರ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಚಾರದ ಸಂಕಷ್ಟ, ವಾಹನ ನಿಲುಗಡೆ, ಏಕಮುಖ ಸಂಚಾರ, ವಾಹನದಟ್ಟಣೆ ಮತ್ತಿತರ ವ್ಯವಸ್ಥೆಗಳಲ್ಲಿನ ಲೋಪಗಳ ಬಗ್ಗೆ ಪೊಲೀಸರು ಹಾಗೂ ನಾಗರೀಕರ “ಜನ ಸಂಪರ್ಕ” ಸಭೆ ನಗರದಲ್ಲಿ ಇಂದು ನಡೆಯಿತು. ನಗರದ ರೆಡ್ ಬ್ರಿಕ್ಸ್ನ “ಸತ್ಕಾರ್ ಸಭಾಂಗಣ”ದಲ್ಲಿ ಡಿವೈಎಸ್‌ಪಿ ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿನ ವಾಹನ ಸಂಚಾರ ಮತ್ತು ನಿಲುಗಡೆಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಚರ್ಚಿಸಲಾಯಿತು. ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರು ಮಾತನಾಡಿ, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಜನ ಮತ್ತು ವಾಹನ ದಟ್ಟಣೆೆಯಿಂದ ಸಂಚಾರ ಸಮಸ್ಯೆಗಳು ನಿರ್ಮಾಣವಾಗುತ್ತಿದೆ. ಇಕ್ಕಟ್ಟಿನ ರಸ್ತೆಗಳು, ವಾಹನ ನಿಲುಗಡೆಗೆ ಅಗತ್ಯ ಜಾಗದ ಕೊರತೆ ಎದ್ದು ಕಾಣುತ್ತಿದೆ. ಮಾರುಕಟ್ಟೆ ವಿಭಾಗದಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಾರುಕಟ್ಟೆ ಬಳಿಯಿಂದ ಸಿ.ವಿ.ಶಂಕರ್ ರಸ್ತೆಯವರೆಗೆ ಏಕಮುಖ ಮಾರ್ಗದ ಬದಲಾಗಿ ದ್ವಿಪಥ ವಾಹನ ಸಂಚಾರಕ್ಕೆ ಅವಕಾಶ ಒದಗಿಸಿದಲ್ಲಿ ಸಂಚಾರದ ಒತ್ತಡವನ್ನು ಕಡಿಮೆಗೊಳಿಸಬಹುದೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪತ್ರಿಕಾ ಭವನದ ಜಂಕ್ಷನ್ ಬಳಿ ಸದಾ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ಈ ರಸ್ತೆಯ ಬಳಿಯಲ್ಲಿರುವ ಆಸ್ಪತ್ರೆಗಳಿಗೆ ಬರುವವರು ಏಕಮುಖ ಮಾರ್ಗದ ಹಿನ್ನೆಲೆ ಸುತ್ತು ಬಳಸಿ ಬರಬೇಕಾದ ಸಂಕಷ್ಟವಿರುವುದನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು. ಉದ್ಯಮಿ ಮೊಹಮ್ಮದ್ ಆಸಿಫ್ ಮಾತನಾಡಿ ಪ್ರವಾಸಿ ಕೇಂದ್ರದ ಹಿನ್ನೆಲೆಯಲ್ಲಿ ಮಡಿಕೇರಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ಮತ್ತು ಗೂಗಲ್ ಮ್ಯಾಪ್‌ನ ಆಧಾರದಲ್ಲಿ ನಗರದಲ್ಲಿ ಸಂಚರಿಸುವ ಸಂದರ್ಭ ಏಕಮುಖ ಮಾರ್ಗದ ಮಾಹಿತಿ ಇಲ್ಲದೆ ಗೊಂದಲ ಮತ್ತು ಸಂಚಾರ ಸಮಸ್ಯೆಗಳು ಉದ್ಭವಿಸುತ್ತಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆÉದರು. ನಗರದ ಹಲವೆಡೆ ವಾಹನ ನಿಲುಗಡೆ ಸ್ಥಳಗಳಲ್ಲಿ ಕೆಲವು ವಾಹನಗಳನ್ನು ಬೆಳಗ್ಗಿನಿಂದ ಸಂಜೆಯವರೆಗೆ ನಿಲ್ಲಿಸಲಾಗುತ್ತಿದೆ. ಇದು ಕೂಡ ಸಮಸ್ಯೆಗೆ ಕಾರಣವಾಗುತ್ತಿದೆ ಎಂದರು. ಸಾರ್ವಜನಿಕರಿಂದ ಕೇಳಿ ಬಂದ ಸಂಚಾರಿ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರು, ನಗರಕ್ಕೆ ಗೂಗಲ್ ಮ್ಯಾಪ್ ಆಧರಿಸಿ ಬರುವ ಪ್ರವಾಸಿಗರು, ಇಲ್ಲಿನ ರಸ್ತೆ ನಿಯಮಗಳನ್ನು ಅರಿಯದೆ ಸಾಗುತ್ತಿದ್ದಾರೆ. ಇದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ “ಗೂಗಲ್” ಸಂಸ್ಥೆಯನ್ನು ಸಂಪರ್ಕಿಸಿ ನಗರದ ಸಂಚಾರಿ ಮಾಹಿತಿಯನ್ನು ನೀಡಿ ಲೋಪಗಳನ್ನು ಸರಿಪಡಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪ್ರಸ್ತುತ ನಗರದಲ್ಲಿ ವಾಹನ ನಿಲುಗಡೆಗೆ ಮಾರ್ಕ್ ಮಾಡಿರುವ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಸರಿಯಾಗಿ ನಡೆಯುತ್ತಿದೆ. ಉಳಿದ ಪ್ರದೇಶಗಳಲ್ಲಿ ನಿಲುಗಡೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆ ವಾಹನ ನಿಲುಗಡೆ ಸ್ಥಳಗಳಲ್ಲಿ ಬಣ್ಣ ಬಳಿದು ಮಾರ್ಕಿಂಗ್ ಮಾಡಲು ಉದ್ಯಮಿಗಳು ಪೊಲೀಸ್ ಇಲಾಖೆಗೆ ನೆರವಾಗಬೇಕೆಂದು ಅವರು ಮನವಿ ಮಾಡಿದರು. ಮಡಿಕೇರಿಗೆ ನಗರಸಭಾ ಅಧಿಕಾರಿ ಸೌಮ್ಯ ಅವರು ಮಾತನಾಡಿ, ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳುವಲ್ಲಿ ಸಾರ್ವಜನಿಕರ ಹೊಣೆಗಾರಿಕೆಯು ಇರುವುದಾಗಿ ತಿಳಿಸಿದರು. ಮಡಿಕೇರಿ ನಗರ ಸಂಚಾರಿ ಠಾಣಾಧಿಕಾರಿಗಳಾದ ಶ್ರೀಧರ್, ತಮ್ಮಯ್ಯ, ಎಎಸ್‌ಐ ನಂದ ಹಾಗೂ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
Breaking News
- *ಕನ್ನಡ ಸಾಹಿತ್ಯ ಭವನ ನಿರ್ಮಾಣ : ಅಗತ್ಯ ಸಹಕಾರಕ್ಕೆ ಕೊಡಗು ಜಿಲ್ಲಾ ಕ.ಸಾ.ಪ ಮನವಿ*
- *ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ ಉದ್ಘಾಟನೆ : ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯಲಿ : ಶಾಸಕ ಡಾ.ಮಂತರ್ ಗೌಡ*
- *ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಲೇಔಟ್, ಮೆಗಾ ಟೌನ್ಶಿಪ್ಗೆ ವಿರೋಧ : ಕಡಂಗದಲ್ಲಿ ಸಿಎನ್ಸಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
- *ಡಿ.8 ರಂದು ಮಡಿಕೇರಿಯಲ್ಲಿ ಸಂಸದರ ನೂತನ ಕಚೇರಿ ಆರಂಭ*
- *ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ*
- *ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
- *ಕರಿಕೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ಪದಾಧಿಕಾರಿಗಳ ಆಯ್ಕೆ*
- *ವೀರ ಸೇನಾನಿಗಳಿಗೆ ಅಗೌರವ : ಡಿ.6ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರಿಂದ ಪ್ರತಿಭಟನೆ*
- *‘ಸ್ವಾಭಿಮಾನಿ’ ಸಮಾವೇಶದಲ್ಲಿ ಕೊಡಗಿನಿಂದ 8 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ*
- *ಚೇಶೈರ್ ಹೋಮ್ ಶಾಲೆಯ ಮುಖ್ಯಶಿಕ್ಷಕ ಶಿವರಾಜ್ ಗೆ ಸನ್ಮಾನ*