ಮೈಸೂರುNEWS DESK ಆ.24 : ಸಾವಿನಲ್ಲೂ ದಂಪತಿ ಒಂದಾದ ಘಟನೆ ಕೊಳ್ಳೆಗಾಲದ ಹಾನೂರುವಿನ ಮಂಗಲ ಗ್ರಾಮದ ರಾಮನಗುಡ್ಡದಲ್ಲಿ ನಡೆದಿದೆ. ರಾಜಶೇಖರ ವೀರಣ್ಣರಾಧ್ಯ (68) ಹಾಗೂ ಪತ್ನಿ ಸುಮಿತ್ರ (60)ಮೃತ ದುರ್ದೈವಿಗಳಾಗಿದ್ದಾರೆ. ಸುಮಿತ್ರ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ವಿಷಯ ತಿಳಿದ ಕೆಲವೇ ಕ್ಷಣಗಳಲ್ಲಿ ಪತಿ ರಾಜಶೇಖರ ವೀರಣ್ಣರಾಧ್ಯ ಅವರಿಗೂ ಹೃದಯಾಘಾತವಾಗಿದೆ. ಇವರು ಕೂಡ ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.