ಅಬುಧಾಬಿ NEWS DESK ಆ.25 : ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ 9 ವರ್ಷಗಳ ಹಿಂದೆ ಸಮಾನ ಮನಸ್ಕ ಯುವ ಸಮೂಹದಿಂದ ಕೊಡಗು ಹಳೆ ವಿದ್ಯಾಥಿಗಳ ಸಂಘವು ದುಬೈ ಕೇಂದ್ರೀಕರಿಸಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕೊಡಗಿನ ಹಳೆ ವಿದ್ಯಾರ್ಥಿಗಳನ್ನು ಒಳಗೊಂಡು ರೂಪುಗೊಂಡಿತು. ಇದರ 2024-25ನೇ ಸಾಲಿನ ಕಾರ್ಯಕಾರಿ ಮಂಡಳಿಯ ಆಯ್ಕೆ ನಡೆದಿದ್ದು, ಅಸೋಸಿಯೇಷನ್ ಅಧ್ಯಕ್ಷರಾಗಿ ಅಬ್ದುಲ್ಲಾ ಕೊಂಡಂಗೇರಿ, ಉಪಾಧ್ಯಕ್ಷರಾಗಿ ಸೌರಭ್ ಗೋಣಿಕೊಪ್ಪ, ಮುಖ್ಯ ಕಾರ್ಯದರ್ಶಿಗಳಾಗಿ ರಫೀಕಲಿ ಕುಂಜಿಲ ಹಾಗೂ ಶಾಫಿ ಕೊಟ್ಟಮುಡಿ ಆಯ್ಕೆಯಾದರು. ಖಜಾಂಚಿಯಾಗಿ ಸಾದಿಕ್ ಕೊಳಕೇರಿ, ಸದಸ್ಯರುಗಳಾಗಿ ಆಗಿ ಇರ್ಫಾನ್ ಮೂರ್ನಾಡು, ಕವನ್ ಗೋಣಿಕೊಪ್ಪ, ಮುಜೀಬ್ ಕೊಂಡಂಗೇರಿ, ಪ್ರತಾಪ್ ಮಡಿಕೇರಿ, ಝಿಯಾ ಚೋಕಂಡಳ್ಳಿ, ಅಕ್ರಮ್ ಸೋಮವಾರಪೇಟೆ, ಶರತ್ ಮಡಿಕೇರಿ, ಗೌತಮ್ ವಿರಾಜಪೇಟೆ, ಸಲಹಾ ಸಮಿತಿಗೆ ಅಶ್ರಫ್ ಮಡಿಕೇರಿ, ಹಮೀದ್ ವಿರಾಜಪೇಟೆ ಹಾಗೂ ಸಲೀಂ ಮೂರ್ನಾಡು ನೇಮಕಗೊಂಡರು. ಕೊಡಗು ಹಳೆ ವಿಧ್ಯಾರ್ಥಿಗಳ ಸಂಘವು ಕಳೆದ ಹಲವು ವರ್ಷಗಳಿಂದ ಅನೇಕ ಮಾನವೀಯ, ಶೆಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಲು ಕಾರ್ಯಾಗಾರ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಕೊಡಗಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಕೊಡಗಿನ ಬಡ ಹೆಣ್ಣು ಮಕ್ಕಳ ಮದುವೆಗೆ ಮತ್ತು ಬಡ ರೋಗಿಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್ ಮುಂತಾದ ಸಂಕಷ್ಟ ಸಮಯದಲ್ಲಿ ಆರ್ಥಿಕ ನೆರವು ಮಾಡಿದ್ದು, ಫುಡ್ ಕಿಟ್ ಕೂಡ ವಿತರಿಸಲಾಗಿದೆ. ಕೊಡಗಿನಿಂದ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಕೆಲಸ ಹುಡುಕಿ ಬಂದವರಿಗೆ ಉದ್ಯೋಗ ಮಾಹಿತಿ ನೀಡುವುದರೊಂದಿಗೆ ಎಲ್ಲಾ ವರ್ಷವು ಉದ್ಯೋಗ ಮಾರ್ಗದರ್ಶನ ಕಾರ್ಯಗಾರ ನಡೆಸಲಾಗುತ್ತಿದೆ. ಯುಎಇ ವ್ಯಾಪಾರಸ್ಥರನ್ನು, ಕಂಪನಿಗಳ ಎಚ್ ಆರ್ ರನ್ನು ಮುಂತಾದ ಕೆಲಸ ಲಭ್ಯವಿರುವವರನ್ನು ಕರೆಸಿ ಉದ್ಯೋಗ ಮೇಳವನ್ನು ನಡೆಸಿ ಕೊಡಗಿನವರಿಗೆ ಉದ್ಯೋಗ ದೊರಕಿಸಿಕೊಡಲು ಸಂಘ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.