ಮಡಿಕೇರಿ ಆ.28 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಪರಿಕರಗಳಾದ ದುಡಿ, ಧೋಳ್, ಕೊಂಬು, ತಾಳ, ಒಡಿಕತ್ತಿಗಳಿಗೆ ಅರ್ಹ ಕಲಾವಿದರುಗಳು ಹಾಗೂ ದೇವನೆಲೆ, ಐನ್‍ಮನೆ ಮತ್ತು ನೋಂದಾಯಿತ ಸಂಘ-ಸಂಸ್ಥೆ-ಸಮಾಜಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸ ಬಯಸುವವರು ಸ್ವವಿವರಗಳನ್ನು ದಾಖಲೆ ಸಮೇತವಾಗಿ ಸಲ್ಲಿಸುವುದು. ತಮಗಳ ಸೇವಾಕ್ಷೇತ್ರದಲ್ಲಿನ ಅನುಭವ ಹಾಗೂ ಕೊಡವ ಸಂಸ್ಕೃತಿಗೆ ನೀಡಿರುವ ಕೊಡುಗೆಗಳ ದಾಖಲೆಗಳನ್ನು ಸಲ್ಲಿಸುವುದು. ಕೊಡವ ಅಕಾಡೆಮಿಯಿಂದ ಅರ್ಹತೆಯ ಮೇರೆಗೆ ಪರಿಕರಗಳನ್ನು ಪಡೆಯುವ ವ್ಯಕ್ತಿಗಳು, ಸಂಸ್ಥೆಗಳು ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಜೊತೆಗೆ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುವಂತೆ ದೃಡೀಕರಿಸುವುದು ಕಡ್ಡಾಯವಾಗಿದೆ. ಧೋಳ್, ಕೊಂಬುಗಳನ್ನು ಪಡೆಯುವ ಕಲಾವಿದರು ಕೊಡವ ಸಂಸ್ಕೃತಿ ಪಾಲಕರು ಹಾಗೂ ಕೊಡವ ಭಾಷಿಕರಾಗಿದ್ದು ಅಕಾಡೆಮಿಯ ಕಾರ್ಯಕ್ರಮಗಳಿಗೆ ಆಹ್ವಾನದ ಮೇರೆ ನಿಯಮಾನುಸಾರ ಭಾಗವಹಿಸುವಂತವರಾಗಿರತಕ್ಕದ್ದು. ಅಕಾಡೆಮಿಯ ಶರತ್ತುಗಳು ಹಾಗೂ ನೀತಿ ನಿಯಮಗಳಿಗೆ ಹೊಂದಿಕೊಂಡು ಕೊಡವ ಸಂಸ್ಕೃತಿಯ ಪೋಷಣೆಗೆ ಸದಾ ಸಿದ್ದರಿರಬೇಕು. ಈ ಹಿಂದೆ ಪರಿಕರಗಳನ್ನು ಪಡೆದಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಅಂತಹವರ ಅರ್ಜಿಯನ್ನು ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.09.2024. ವಿಳಾಸ: ಅಧ್ಯಕ್ಷರು / ರಿಜಿಸ್ಟ್ರಾರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಭವನ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಮಡಿಕೇರಿ-571201 ಕೊಡಗು.










