ಸಿದ್ದಾಪುರ ಸೆ.2 NEWS DESK : ನೈಮ ಎಜುಕೇಶನಲ್ & ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೆಲ್ಲಿಹುದಿಕೇರಿ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಗ್ರಾಮ ಆಡಳಿತಾಧಿಕಾರಿ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಪ್ರತಿ ಭಾನುವಾರಗಳಂದು ನಡೆಯುವ ತರಬೇತಿಗೆ ಚಾಲನೆ ದೊರೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಗು ಜಿ.ಪಂ ಮುಖ್ಯಲೆಕ್ಕಾಧಿಕಾರಿ ಹಾಗೂ ಮುಖ್ಯ ಯೋಜನಾಧಿಕಾರಿಗಳಾದ ಝೀವಲ್ ಖಾನ್ ಭಾಗವಹಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯ ಸಿದ್ಧತೆ ಕುರಿತು ತರಬೇತಿ ನೀಡಿದರು. ಸಿದ್ದಾಪುರ ಇಕ್ರ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಜಾಫರ್ ಕಡ್ಡಾಯ ಕನ್ನಡ ಪತ್ರಿಕೆ ವಿಷಯದ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ರೆಹಮತ್ ಅಲಿ ಬಾವಾ ಪ್ರಸ್ತಾವಿಕವಾಗಿ ಮಾತನಾಡಿ ಶುಭ ಕೋರಿದರು. ನೈಮಾ ಸಂಸ್ಥೆಯ ಅಧ್ಯಕ್ಷ ಒ.ಎಂ.ನೌಶಾದ್, ಪ್ರಧಾನ ಕಾರ್ಯದರ್ಶಿ ಪಿ.ಕೆ.ಮುಸ್ತಾಫಾ, ಕಾರ್ಯದರ್ಶಿ ಸಿ.ಹೆಚ್.ಜಂಶೀರ್, ಮೀಡಿಯಾ ವಿಭಾಗದ ಎಂ.ಎಂ.ಮುತ್ತಲಿಬ್, ವಿ.ಎಸ್.ಫಾಜಿಲ್, ಎಂ.ಹೆಚ್.ಸಮೀದ್, ಗ್ರಂಥಪಾಲಕರಾದ ಹೆಚ್.ಎ.ವಾಸಂತಿ ಹಾಜರಿದ್ದರು. ತರಬೇತಿ ಸಂಯೋಜಕ ಪಿ.ಇ.ರಿಯಾಸ್ ಸ್ವಾಗತಿಸಿದರು. ಪಿಡಿಓ ಅಬ್ದುಲ್ಲ ವಂದಿಸಿದರು.
Breaking News
- *ವಿರಾಜಪೇಟೆಯಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟ : ಐವರ ಬಂಧನ*
- *ಗುಡ್ಡೆಹೊಸೂರು : ರಾಷ್ಟ್ರೀಕೃತ ಬ್ಯಾಂಕ್ ಮಾದರಿಯ ಡಿಜಿಟಲೀಕರಣ ವ್ಯವಸ್ಥೆ ಸಹಕಾರಿ ಕ್ಷೇತ್ರದ ಬ್ಯಾಂಕಿಂಗ್ ನಲ್ಲೂ ಅತ್ಯಗತ್ಯ : ಎಂ.ಎಂ.ಶ್ಯಾಮಲ*
- *ರಾಷ್ಟ್ರೀಯ ಸಬ್ ಜೂನಿಯರ್ ಮಹಿಳಾ ಹಾಕಿ ತಂಡದ ಸೆಂಟರ್ ಫಾರ್ವರ್ಡ್ ಆಗಿ ಮಡಿಕೇರಿಯ ಅಕ್ಷರ*
- *ಸೋಮವಾರಪೇಟೆ : ಅಪ್ಪು ಅಭಿಮಾನಿಗಳ ಬಳಗದಿಂದ ಸಂಭ್ರಮದ ಮಕ್ಕಳ ದಿನಾಚರಣೆ : ಹಲವು ಸಾಧಕರಿಗೆ ಸನ್ಮಾನ*
- *ನಿಧನ ಸುದ್ದಿ*
- *ಮಡಿಕೇರಿ ಅಂಗನವಾಡಿಯಲ್ಲಿ ಬಾಲಮೇಳದಲ್ಲಿ ಮಿಂಚಿದ ಪುಟಾಣಿಗಳು*
- *ಮಡಿಕೇರಿಯ ಎಸ್ಎಸ್ ಆಸ್ಪತ್ರೆಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ : ಕಲಾಪ್ರತಿಭೆಗೆ ಸಾಕ್ಷಿಯಾದ ವಿದ್ಯಾರ್ಥಿಗಳು*
- *ಮಡಿಕೇರಿಯ ಹಿಂದೂಸ್ತಾನಿ ಶಾಲೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳಲ್ಲಿ ದೇಶದ ಭವ್ಯ ಭವಿಷ್ಯ ಕಂಡ ನೆಹರು*
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*