
ವಿರಾಜಪೇಟೆ ಸೆ.2 NEWS DESK : ವಿರಾಜಪೇಟೆಯ ಮೂರ್ನಾಡು ರಸ್ತೆಯಲ್ಲಿರುವ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ (ರಿ)ವತಿಯಿಂದ ಗೌರಿ ಗಣೇಶೋತ್ಸವದ ಪ್ರಯುಕ್ತ ಸೆ. 9 ರಂದು ತಾಲ್ಲೂಕು ಮಟ್ಟದ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 9.30 ಗಂಟೆಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೇಗಳು ನಡೆಯಲಿದ್ದು, ಸಬ್ ಜೂನಿಯರ್ (6 ರಿಂದ 11), ಜೂನಿಯರ್ (12 ರಿಂದ 16) ಸೀನಿಯರ್ (17 ರಿಂದ 23) ಸಾರ್ವಜನಿಕ ವಿಭಾಗ (23 ರಿಂದ ಮೇಲ್ಪಟ್ಟವರು) ಭಾಗವಹಿಸಬಹುದು. ಭಾಗವಹಿಸುವ ಸ್ಪರ್ಧಾರ್ಥಿಗಳು 9008613729 ವಿಮಲಾ ದಶರಥ್ ಅವರ ವಾಟ್ಸಾಪ್ ನಂಬರ್‍ಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಿದೆ.








