ಮಡಿಕೇರಿ ಸೆ.2 NEWS DESK : ಗೋಣಿಕೊಪ್ಪಲಿನ ವೈಸ್ ಮೆನ್ ಕ್ಲಬ್ ವತಿಯಿಂದ ಸೆ.15 ರಂದು ವಿರಾಜಪೇಟೆಯ ಸಂತ ಅನ್ನಮ್ಮ ಶಾಲಾ ಆವರಣದಲ್ಲಿ ದ್ವಿತೀಯ ವರ್ಷದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷÀ ಕಾಣತಂಡ ಜಗದೀಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಂದ್ಯಾವಳಿಯಲ್ಲಿ 300 ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ಸಾಲಿನಲ್ಲಿ 180 ಸ್ಪರ್ಧಿಗಳು ಪಾಲ್ಗೊಂಡಿದ್ದರು ಎಂದರು. ಕ್ಲಬ್‍ನ ಯೋಜನಾ ನಿರ್ದೇಶಕ ಬಿ.ಜೆ.ಬೋಪಣ್ಣ ಅವರು ಮಾತನಾಡಿ ಚೆಸ್ ಪಂದ್ಯಾವಳಿ 13 ವರ್ಷದೊಳಗಿನ ಮಕ್ಕಳ ಪ್ರಥಮ ವಿಭಾಗ (ಪ್ರವೇಶ ಶುಲ್ಕ 400 ರೂ.,), 13 ರಿಂದ 18 ವರ್ಷದೊಳಗಿನ ದ್ವಿತೀಯ ವಿಭಾಗ (ಪ್ರವೇಶ ಶುಲ್ಕ 500 ರೂ.) ಮತ್ತು ಮುಕ್ತ ತೃತೀಯ ವಿಭಾಗ (ಪ್ರವೇಶ ಶುಲ್ಕ 700ರೂ.) ಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸ್ಪರ್ಧೆಯ ದಿನದಂದು ಬೆಳಗ್ಗೆ 8.30ಕ್ಕೆ ಸ್ಪರ್ಧಿಗಳು ಸಂತ ಅನ್ನಮ್ಮ ಶಾಲಾ ಆವರಣದಲ್ಲಿದ್ದು, ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬೇಕು ಮತ್ತು ಸ್ಪರ್ಧಿಗಳು ಜನ್ಮದಿನಾಂಕವನ್ನು ದೃಢೀಕರಿಸುವ ಯಾವುದೇ ದಾಖಲೆಯನ್ನು ಹಾಜರು ಪಡಿಸುವುದು ಕಡ್ಡಾಯ, ಚೆಸ್ ಬೋರ್ಡ್ ಮತ್ತು ಗಡಿಯಾರವನ್ನು ತರಬೇಕು. ಪಂದ್ಯಾವಳಿಯನ್ನು ವಿರಾಜಪೇಟೆ ಸರ್ವೋದಯ ಕಾಲೇಜಿನ ಚೆಸ್ ಮಾಸ್ಟರ್ ಹಾಗೂ ಪಂದ್ಯಾವಳಿ ನಿರ್ದೇಶಕರಾದ ಪಿ.ಆರ್.ಪ್ರದೀಪ್ ಅವರು ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
::: ಬಹುಮಾನ :::
ಪಂದ್ಯಾವಳಿಯ ಪ್ರಥಮ ಮತ್ತು ದ್ವಿತೀಯ ವಿಭಾಗಗಳಲ್ಲಿ ಪ್ರಥಮ ಬಹುಮಾನವಾಗಿ ತಲಾ 8 ಸಾವಿರ, ದ್ವಿತೀಯ 6 ಸಾವಿರ ಮತ್ತು ತೃತೀಯ 4 ಸಾವಿರ ರೂ. ಮತ್ತು ಟ್ರೋಫಿಗಳನ್ನು ನೀಡಲಾಗುತ್ತದೆ. ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ 8 ಸಾವಿರ ಮತ್ತು ತೃತೀಯ 6 ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ಪಂದ್ಯಾವಳಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಎಸ್. ಜಗದೀಶ್, ಅಧ್ಯಕ್ಷರು ಮೊ.9448644267, ಅನಿತಾ ಲೋಬೋ, ಖಜಾಂಚಿ ಮೊ.7760699881 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಕ್ಲಬ್ ನಿರ್ದೇಶಕ ರಾಬಿನ್ ಆಂಟೋನಿ ಮಾತನಾಡಿ, ವೈಸ್ ಮೆನ್ ಕ್ಲಬ್ 1922 ರಲ್ಲಿ ಅಮೇರಿಕದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 1940 ರಲ್ಲಿ ಭಾರತದಲ್ಲಿ ಆರಂಭಗೊಂಡಿತು. ವಿಶ್ವದಾದ್ಯಂತ 70 ಸಾವಿರ ಸದಸ್ಯತ್ವವನ್ನು ಹೊಂದಿರುವ ಕ್ಲಬ್‍ನ್ನು 2018 ರಲ್ಲಿ ಗೋಣಿಕೊಪ್ಪಲಿನಲ್ಲಿ ಆರಂಭಿಸಿ ವಿವಿಧ ಸೇವಾ ಕಾರ್ಯಗಳೊಂದಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆಯೆಂದು ವಿವರಗಳನ್ನಿತ್ತರು. ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಸಿ.ಜೆ.ಆಂಟೋ ಹಾಗೂ ಖಜಾಂಚಿ ಅನಿತಾ ಲೋಬೋ ಉಪಸ್ಥಿತರಿದ್ದರು.
Breaking News
- *ವಿರಾಜಪೇಟೆಯಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟ : ಐವರ ಬಂಧನ*
- *ಗುಡ್ಡೆಹೊಸೂರು : ರಾಷ್ಟ್ರೀಕೃತ ಬ್ಯಾಂಕ್ ಮಾದರಿಯ ಡಿಜಿಟಲೀಕರಣ ವ್ಯವಸ್ಥೆ ಸಹಕಾರಿ ಕ್ಷೇತ್ರದ ಬ್ಯಾಂಕಿಂಗ್ ನಲ್ಲೂ ಅತ್ಯಗತ್ಯ : ಎಂ.ಎಂ.ಶ್ಯಾಮಲ*
- *ರಾಷ್ಟ್ರೀಯ ಸಬ್ ಜೂನಿಯರ್ ಮಹಿಳಾ ಹಾಕಿ ತಂಡದ ಸೆಂಟರ್ ಫಾರ್ವರ್ಡ್ ಆಗಿ ಮಡಿಕೇರಿಯ ಅಕ್ಷರ*
- *ಸೋಮವಾರಪೇಟೆ : ಅಪ್ಪು ಅಭಿಮಾನಿಗಳ ಬಳಗದಿಂದ ಸಂಭ್ರಮದ ಮಕ್ಕಳ ದಿನಾಚರಣೆ : ಹಲವು ಸಾಧಕರಿಗೆ ಸನ್ಮಾನ*
- *ನಿಧನ ಸುದ್ದಿ*
- *ಮಡಿಕೇರಿ ಅಂಗನವಾಡಿಯಲ್ಲಿ ಬಾಲಮೇಳದಲ್ಲಿ ಮಿಂಚಿದ ಪುಟಾಣಿಗಳು*
- *ಮಡಿಕೇರಿಯ ಎಸ್ಎಸ್ ಆಸ್ಪತ್ರೆಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ : ಕಲಾಪ್ರತಿಭೆಗೆ ಸಾಕ್ಷಿಯಾದ ವಿದ್ಯಾರ್ಥಿಗಳು*
- *ಮಡಿಕೇರಿಯ ಹಿಂದೂಸ್ತಾನಿ ಶಾಲೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳಲ್ಲಿ ದೇಶದ ಭವ್ಯ ಭವಿಷ್ಯ ಕಂಡ ನೆಹರು*
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*