ವಿರಾಜಪೇಟೆ NEWS DESK ಸೆ.4 : ಕಾರ್ಮಿಕರಿಬ್ಬರ ಕಲಹ ಓರ್ವನ ಸಾವಿನಲ್ಲಿ ಕೊನೆಯಾದ ಘಟನೆ ವಿರಾಜಪೇಟೆ ತಾಲ್ಲೂಕಿನ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ. ಕೊಳತ್ತೋಡು ಬೈಗೋಡು ಗ್ರಾಮದ ನಿವಾಸಿ ಮೊಗೇರ ವಿಶ್ವ(40) ಎಂಬುವವರೇ ಮೃತ ದುರ್ದೈವಿ. ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಡಿ ಮೊಗೇರ ಗಣೇಶ ಎಂಬಾತನನ್ನು ಬಂಧಿಸಲಾಗಿದೆ. ಲೈನ್ ಮನೆಯಲ್ಲಿ ವಾಸವಿದ್ದ ಈ ಇಬ್ಬರು ಕಾರ್ಮಿಕರು ಮದ್ಯದ ಅಮಲಿನಲ್ಲಿ ಕಲಹ ನಡೆಸಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಸಾವಿನಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.










