ಮಡಿಕೇರಿ ಸೆ.14 NEWS DESK : ರಾಷ್ಟ್ರೀಯ ಮಟ್ಟದ ಇನ್ಪೆರ್ ಮಾನಕ್ ಅವಾರ್ಡ್ ಸ್ಪರ್ಧೆಗೆ ಎಂ.ಎಸ್.ದೇಚಮ್ಮ ಆಯ್ಕೆಯಾಗಿದ್ದಾಳೆ. ಕೊಡಗು ವಿದ್ಯಾಲಯ ಶಾಲೆಯಲ್ಲಿ 2022-23ರ ಸಾಲಿನಲ್ಲಿ 10ನೇ ತರಗತಿ ಓದುತ್ತಿದ್ದ ಎಂ.ಎಸ್.ದೇಚಮ್ಮ ಅವರು ವಿಜ್ಞಾನ ಶಿಕ್ಷಕಿ ಪೊನ್ನಮ್ಮ ಪಿ. ಎಸ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ಓವರ್ ಹೆಡ್ ಟ್ಯಾಂಕ್ ಕ್ಲಿನರ್ ಪರಿಕಲ್ಪನೆಯು ರಾಷ್ಟ್ರೀಯ ಮಟ್ಟದ ಇನ್ಪೆರ್ ಮಾನಕ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ಪರಿಕಲ್ಪನೆಯ ಸಾಧನವು ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ ದೈನಂದಿನ ಜೀವನದಲ್ಲಿ ಸೃಜನ ಶೀಲ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ. ದೇಚಮ್ಮ ಪ್ರಸ್ತುತ ನಳಂದ ಗುರುಕುಲ ಕಾಲೇಜಿನಲ್ಲಿ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ತನ್ನ, ಪರಿಕಲ್ಪನೆಯು ಯಶಸ್ಸು ಗಳಿಸಲು ಬೆನ್ನೆಲುಬಾಗಿ ಸಹಕರಿಸಿದ ಮಾರ್ಗದರ್ಶಕರು, ಕೊಡಗು ವಿದ್ಯಾಲಯ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಕುಟುಂಬದವರು ಹಾಗೂ ಗೆಳೆಯರ ಸಹಾಯವನ್ನು ಸ್ಮರಿಸಿದಳು. ಎಂ.ಎಸ್.ದೇಚಮ್ಮಅರ್ಪಟ್ಟು ಮುಕ್ಕಾಟ್ಟಿರ ಪಿ ಸುಬ್ರಮಣಿ ಮತ್ತು ಅಂಜು ಸುಬ್ರಮಣಿ (ತಾಮನೆ ಅಮ್ಮಂಡ ) ಅವರ ಪುತ್ರಿ. ಈಕೆ ದಿನಾಂಕ ಸೆಪ್ಟೆಂಬರ್ 17 ಮತ್ತು 18ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುವ 11ನೇ ರಾಷ್ಟ್ರ ಮಟ್ಟದ ಪ್ರದರ್ಶನ ಮತ್ತು ಯೋಜನಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.